ದಾವಣಗೆರೆ, ಜು. 22- ನಗರದ ಐ.ಎಂ.ಎ. ಮಹಿಳಾ ವಿಭಾಗದಿಂದ ಡಾಕ್ಟರ್ಸ್ ಡೇ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಪ್ರಸೂತಿ ತಜ್ಞರಾದ ಡಾ. ಶೋಭಾ ಧನಂಜಯ ಆಗಮಿಸಿ, ಋತುಬಂಧದ ಮೊದಲು ಮತ್ತು ನಂತರ ಆಗುವ ಬದಲಾವಣೆಯ ಬಗ್ಗೆ ವಿವರಿಸಿದರು.
ವೇದಿಕೆಯಲ್ಲಿ ಅಧ್ಯಕ್ಷರಾದ ತ್ರಿವೇಣಿ ಮಲ್ಲೇಶ್, ಹಾಗೂ ಕಾರ್ಯದರ್ಶಿ ಶಿವಪ್ರಭ ಉಪಸ್ಥಿತರಿದ್ದರು. ಸುಮತಿ, ಸೌಭಾಗ್ಯ, ಲತಾ, ಶೀತಲ್ ಕಾರ್ಯಕ್ರಮದ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸಿದರು.