ದಾವಣಗೆರೆ, ಜು. 22 – ಹಳೇಬಾತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವನ ಮಹೋತ್ಸವವನ್ನು ನಡೆಸಲಾಯಿತು. ಸುಮಾರು 1000 ಗಿಡಗಳನ್ನು ನೆಡಲಾಯಿತು. 1000 ಗಿಡಗಳನ್ನು ಬಾತಿ ವಿಶ್ವನಾಥ ಅವರು ಕೊಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಪಂಚಾಯತಿ ಅಧ್ಯಕ್ಷರು, ಸದಸ್ಯರುಗಳು, ಪಿಡಿಓ, ಪಂಚಾಯತಿ ಸಿಬ್ಬಂದಿ, ಶಾಲೆಯ ಮಕ್ಕಳು, ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯವರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.
January 10, 2025