ಜಗಳೂರು, ಜು. 22 – ಅತೀ ಹಿಂದುಳಿದ ಪಿಂಜಾರ /ನದಾಫ್ ಅಭಿವೃದ್ಧಿ ನಿಗಮಕ್ಕೆ ಅನುದಾನ ಒದಗಿಸಲು ಒತ್ತಾಯಿಸಿ ರಾಜ್ಯ ಸಂಘದ ಕರೆಯ ಮೇರೆಗೆ ಇಂದು ತಾಲ್ಲೂಕು ಸಂಘದ ವತಿಯಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ 22 ಲಕ್ಷಕ್ಕೂ ಅಧಿಕ ಸಂಖ್ಯೆ ಹೊಂದಿರುವ ಪಿಂಜಾರ/ನದಾಫ ಜನಾಂಗವು ಸಾಮಾಜಿಕ, ಔದ್ಯೋಗಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರ ಸೇರಿದಂತೆ ಅತ್ಯಂತ ಶೋಷಣೆಯಿಂದ ನಲುಗುತ್ತಿದೆ. ಪ್ರವರ್ಗ-1 ಮೀಸಲಾತಿಯಡಿ ಅಲ್ಪಸಂಖ್ಯಾತ ಹಿಂದುಳಿದ ವರ್ಗದ ಯೋಜನೆಯಡಿ ಸೌಲಭ್ಯಗಳನ್ನು ನೀಡಲು ಸರ್ಕಾರದ ಆದೇಶವಿದ್ದರೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಸೌಲಭ್ಯ ವಂಚಿತಗೊಂಡಿ ರುವ ಪಿಂಜಾರ ಸಮುದಾಯದಿಂದ ಏಕಕಾಲದಲ್ಲಿ ಮನವಿ ಸಲ್ಲಿಸುವ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದು ತಾಲ್ಲೂಕು ಸಂಘದ ಅದ್ಯಕ್ಷ ಜೆ.ಎ. ಫರ್ವೀಜ್ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಶಾರೂಖ್, ಅಕ್ಬರ್ ಅಲಿ, ಇಬ್ರಾಹಿಂ, ಷೌಕತ್ ಅಲಿ, ದಾನಿಸಾಬ್, ನಜೀರ್, ಹೈದರಾಲಿ, ಎಂ.ಎಸ್. ನಜೀರ್ ಅಹಮದ್ , ಮುನ್ನಾ, ಶಾಕೀರ್ ಅಹಮ್ಮದ್, ಸುಬಾನ್, ಅಕ್ಬರ್ ಅಲಿ, ಮುಂತಾದವರು ಇದ್ದರು.