ದಾವಣಗೆರೆ, ಜು. 22- ಗುರು ಪೂರ್ಣಿಮೆ ಅಂಗವಾಗಿ ನಗರದ ಎಸ್. ನಿಜಲಿಂಗಪ್ಪ ಬಡಾವಣೆಯಲ್ಲಿರುವ ಶ್ರೀ ಶಾರದಾಂಬ ದೇವಸ್ಥಾನದಲ್ಲಿ ಶ್ರೀ ಚಂದ್ರಮೌಳೀಶ್ವರ ಮತ್ತು ಶ್ರೀ ಆದಿ ಶಂಕರಾಚಾರ್ಯರಿಗೆ ರುದ್ರಾಭಿಷೇಕ ಸಹಿತ ಪೂಜೆ ನೆರವೇರಿಸಲಾಯಿತು.
ವೇದಬ್ರಹ್ಮ ಶ್ರೀ ಶಂಕರನಾರಾಯಣ ಶಾಸ್ತ್ರಿಗಳ ನೇತೃತ್ವದಲ್ಲಿ ಶ್ರೀ ಶಂಕರ ಸೇವಾ ಸಂಘದ ಅಧ್ಯಕ್ಷ ಡಾ. ಬಿ.ಟಿ. ಅಚ್ಯುತ್, ಕಾರ್ಯದರ್ಶಿ ಶ್ರೀನಿವಾಸ್ ಜೋಶಿ, ವಿನಾಯಕ ಜೋಶಿ ಹಲವು ಪುರೋಹಿತ ರೊಂದಿಗೆ ಮಹಾಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.
ದೇವಸ್ಥಾನದ ಪುರೋಹಿತರುಗಳಾದ ಗಣಪತಿ ಭಟ್, ಸುಬ್ಬರಾಯ ಜಿ. ಭಟ್, ಶ್ರೀರಾಮಚಂದ್ರ ಭಟ್ ಹಾಗೂ ನೂರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಅಂದು ಸಂಜೆ ನಡೆದ ಕಾರ್ಯಕ್ರಮದಲ್ಲಿ ಶ್ರೀ ಶಾರದಾಂಬ ಭಜನಾ ಮಂಡಳಿಯವರಿಂದ ಗುರು ಸಂಕೀರ್ತನ, ಅಷ್ಟೋತ್ತರ ಪಠಣ ಕಾರ್ಯಕ್ರಮ ನೆರವೇರಿತು. ನಂತರ ನಡೆದ ಕಾರ್ಯಕ್ರಮದಲ್ಲಿ ಗುರುವಿನ ಮಹತ್ವದ ಬಗ್ಗೆ ಹಿರಿಯ ಉಪನ್ಯಾಸಕ, ಶಿಕ್ಷಕ, ಜಗನ್ನಾಥ್ ನಾಡಿಗೇರ ಅವರು ಅರ್ಥಪೂರ್ಣ ಹಾಗೂ ಸಾಮಾಜಿಕ ಕಳಕಳಿಯುಳ್ಳ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಶಂಕರ ಸೇವಾ ಸಂಘದ ಉಪಾಧ್ಯಕ್ಷರಾದ ಮೋತಿ ಸುಬ್ರಮಣ್ಯ, ಗಿರೀಶ್ ನಾಡಿಗ್, ಲೆಕ್ಕಪರಿಶೋಧಕ ವಿನಾಯಕ ಜೋಶಿ, ಬಾಲಕೃಷ್ಣ ವೈದ್ಯ, ಅನಿಲ್ ಬಾರೆಂಗಳ್, ಶಾರದಾಂಬ ದೇವಸ್ಥಾನದ ನಿರ್ವಾಹಕ ರಾದ ರಮೇಶ್, ಕೃಷ್ಣಚಂದ್ರರಾವ್, ಪುರೋಹಿತರುಗಳಾದ ಸುಬ್ರಹ್ಮಣ್ಯ, ಪುಟ್ಟಸ್ವಾಮಿ, ರಾಮಕೃಷ್ಣರಾವ್, ರಮೇಶ್ ಪಾಟೀಲ್, ದತ್ತಾತ್ರೇಯ ಜೋಶಿ, ನಾರಾಯಣ ಜೋಶಿ, ಸೋಮನಾಥ್ ಕುಲಕರ್ಣಿ, ವಸಂತ್ ಕುಲಕರ್ಣಿ, ಶ್ರೀಮತಿ ನಳಿನಿ ಅಚ್ಯುತ್ ಹಾಗೂ ಅವರ ವೃಂದದವರು ಪಾಲ್ಗೊಂಡಿದ್ದರು.