ದಾವಣಗೆರೆ, ಜು. 21 – ನಗರದ ಬಿಐಇಟಿ ಕಾಲೇಜಿನ ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2023-24ನೇ ಸಾಲಿನ ಇಂಜಿನಿಯರಿಂಗ್ ಪರೀಕ್ಷೆಗಳಲ್ಲಿ ಒಟ್ಟು 8 ರ್ಯಾಂಕ್ ಪಡೆದಿದ್ದಾರೆ.
ಕೆಮಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಸಹನಾ ಗಂಗಾಧರ್ ನಾಯಕ್ ಪ್ರಥಮ ರ್ಯಾಂಕ್ ಪಡೆದು ವಿ.ಟಿ.ಯು. ಚಿನ್ನದ ಪದಕ ವಿಜೇತರಾಗಿದ್ದಾರೆ. ಪಿ.ಎಸ್. ಶ್ರಾವ್ಯ ಮತ್ತು ಬಿ.ಆರ್. ಹೇಮಾ ಅವರು ಕ್ರಮವಾಗಿ 2 ಮತ್ತು 4ನೇ ರ್ಯಾಂಕ್ ಪಡೆದಿದ್ದಾರೆ.
ಟೆಕ್ಸ್ಟೈಲ್ ವಿಭಾಗದಲ್ಲಿ ಡಿ.ಎಂ. ಪೂಜಾ ಇವರು ಪ್ರಥಮ ರಾಂಕ್ ಪಡೆದು ವಿ.ಟಿ.ಯು. ಚಿನ್ನದ ಪದಕ ವಿಜೇತರಾಗಿದ್ದಾರೆ. ಪಿ. ಪ್ರೇರಣಾ ಅವರು 2ನೇ ರ್ಯಾಂಕ್ ಪಡೆದಿದ್ದಾರೆ.
ಬಯೋಟೆಕ್ನಾಲಜಿ ವಿಭಾಗದಲ್ಲಿ ಎಚ್.ಎಸ್. ಭಾವನಾ, ಎಸ್.ಎನ್. ನಯನ ಮತ್ತು ಸಿ.ಎಸ್. ಸಾತ್ವಿ ಅವರು ಕ್ರಮವಾಗಿ 5, 6 ಮತ್ತು 10ನೇ ರ್ಯಾಂಕ್ ವಿಜೇತರಾಗಿದ್ದಾರೆ.
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಕಳೆದ ವಾರ ಜರುಗಿದ 24ನೇ ಘಟಿಕೋತ್ಸವದಲ್ಲಿ ಪ್ರಥಮ ರ್ಯಾಂಕ್ ವಿಜೇತರು ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಚಿನ್ನದ ಪದಕ ಪಡೆದಿದ್ದಾರೆ. ಇನ್ನುಳಿದ ರ್ಯಾಂಕ್ ವಿಜೇತರು ಕುಲಪತಿ ಡಾ. ಎಸ್. ವಿದ್ಯಾಶಂಕರ್ ಅವರಿಂದ ರಾಂಕ್ ಪ್ರಮಾಣ ಪತ್ರ ಪಡೆದಿದ್ದಾರೆ.