ಹರಿಹರದ ತಾಲ್ಲೂಕು ಮಾದಿಗ ಸಮಾಜದ ಅಧ್ಯಕ್ಷರಾಗಿ ರಜನಿಕಾಂತ್

ಹರಿಹರದ ತಾಲ್ಲೂಕು ಮಾದಿಗ  ಸಮಾಜದ ಅಧ್ಯಕ್ಷರಾಗಿ ರಜನಿಕಾಂತ್

ಹರಿಹರ, ಜು. 21 –  ಹರಿಹರ ತಾಲ್ಲೂಕು ಮಾದಿಗ ಸಮಾಜದ ಅಧ್ಯಕ್ಷರನ್ನಾಗಿ ನಗರಸಭೆ ಸದಸ್ಯ ರಜನಿಕಾಂತ್ ರವರನ್ನು ಸಮಾಜದ ಹಿರಿಯರ ಸಮ್ಮುಖದಲ್ಲಿ ಸರ್ವಾನುಮತದೊಂದಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ನಗರದ ಎ.ಕೆ ಕಾಲೋನಿಯ ಭಜನಾ ಮಂದಿರದಲ್ಲಿ ಸಮುದಾಯದ ಸಭೆಯಲ್ಲಿ ಮಾದಿಗ ಸಮುದಾಯದ ಮುಖಂಡರು ಸೇರಿ ಚರ್ಚಿಸಿ ಒಮ್ಮತದಿಂದ ನೂತನ ಅಧ್ಯಕ್ಷರನ್ನಾಗಿ ನಗರಸಭೆ ಸದಸ್ಯ ರಜನಿಕಾಂತ್ ಅವರನ್ನು ಆಯ್ಕೆ ಮಾಡಿದರು.

ಈ ವೇಳೆ ಮಾತನಾಡಿದ ಅಧ್ಯಕ್ಷ ರಜನಿಕಾಂತ್,     ಸಮಾಜವು ಮುಖ್ಯವಾಹಿನಿಗೆ ಬರಬೇಕಾದರೆ ಮೊದಲು ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಬೇಕಿದೆ. ಈ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದು ತಿಳಿಸಿದರು.  

ಸಭೆಯಲ್ಲಿ ನಗರದ ಹೃದಯ ಭಾಗದಲ್ಲಿರುವ ಹೋಲ್ ಸೇಲ್ ತರಕಾರಿ ಮಾರುಕಟ್ಟೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ, ಸ್ಮಶಾನ,  ವಿವಿಧ ಗ್ರಾಮಗಳಲ್ಲಿ ಕಟ್ಟಿಂಗ್,  ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಮಾದಿಗ ಸಮಾಜದ ಮುಖಂಡ ಹಾಗೂ ಮಾಜಿ ದೂಡಾ ಸದಸ್ಯ ಜಿ.ವಿ. ವೀರೇಶ್ ಮಾತನಾಡಿ, ನಮ್ಮ ಸಮುದಾಯದ ಹಲವಾರು ಸಮಸ್ಯೆಗಳನ್ನು ನೂತನ ಅಧ್ಯಕ್ಷರು ಬಗೆಹರಿಸುವ ಮುಖಾಂತರ ಸಮಾಜದ ಏಳಿಗೆಗಾಗಿ ಶ್ರಮಿಸಬೇಕೆಂದು ಹೇಳಿದರು.

ಮತ್ತೋರ್ವ ಸಮಾಜದ ಮುಖಂಡ ನಾಗಭೂಷಣ್ ಮಾತನಾಡಿ, ಸಮಾಜದ ತಳ ಮಟ್ಟದ ವ್ಯಕ್ತಿಗೂ ಸಹ ಸರ್ಕಾರದಿಂದ ಸಿಗುವ ಸೌಲಭ್ಯಗಳು ದೊರಕಬೇಕು. ಸಮಾಜದ ಮಕ್ಕಳಿ ಗೋಸ್ಕರ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥಾಲಯ, ಕಂಪ್ಯೂಟರ್ ಸೆಂಟರ್‌ಗಳನ್ನು ತೆರೆದು, ಅವರಿಗೂ ಸಹ ಶಿಕ್ಷಣ ನೀಡಲು ಸಹಾಯ ವಾಗುವ ರೀತಿಯಲ್ಲಿ ನಡೆಯಬೇಕು ಎಂದರು.

ನಗರಸಭೆ ಸದಸ್ಯ ಆಟೋ ಹನುಮಂತಪ್ಪ, ವಿರುಪಾಕ್ಷಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್‌ಬಿ ಹನುಮಂತಪ್ಪ, ಮರಿಯಪ್ಪ ನೋಟದವರ್, ಎಚ್. ಕರಿಲಿಂಗಪ್ಪ, ಮಹೇಶ್ ಮೋಟಾರ್, ಬಿಎಸ್ಪಿ ಜಿಲ್ಲಾಧ್ಯಕ್ಷ ಹನುಮಂತಪ್ಪ, ದಲಿತ ಮುಖಂಡ ಕೊಟ್ರೇಶ್, ಪತ್ರಕರ್ತರಾದ ಸುಧಾಕರ್ ಎಚ್, ಪಂಚಾಕ್ಷರಿ, ವಿಶ್ವನಾಥ್ ಮೈಲಾಳ ಹೊಳೆಸಿರಿಗೆರೆ, ರಾಜನಹಳ್ಳಿ ಮಂಜುನಾಥ್, ಭಾನುವಳ್ಳಿ ಬಸಣ್ಣ, ಸುಭಾಷ್ ಚಂದ್ರ ಬೋಸ್ ವಕೀಲರು, ನಗರಸಭೆ ನಾಮ ನಿರ್ದೇಶಿತ ಸದಸ್ಯ ಸಂತೋಷ್ ಪೂಜಾರ್, ಡಿಎಸ್ಎಸ್ ಮುಖಂಡರುಗಳಾದ ಹನುಮಂತಪ್ಪ ಪೈಲ್ವಾನ್, ಹುಲುಗಪ್ಪ, ಕೊಪ್ಪಳ ಮಂಜುನಾಥ್, ದೇವೇಂದ್ರಪ್ಪ ಎಚ್, ಕೃಷ್ಣ, ಮಂಜಪ್ಪ ರಾಜನಹಳ್ಳಿ, ವಿಶ್ವನಾಥ್ ರಾಜನಹಳ್ಳಿ, ಗ್ರಾಮ ಪಂಚಾಯತಿ ಮಾಜಿ ಸದಸ್ಯ ಪರಸಪ್ಪ ಧೂಳೆಹೊಳೆ, ಬಿಎಸ್ಪಿ ಮುಖಂಡ ಕೇಶವ್, ಪ್ರಭಾಕರ್ ವೈ, ದೇವರಬೆಳಕೆರೆ, ಗಂಗನರಸಿ, ಕುಣೆಬೆಳೆಕೆರೆ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!