ಹರಪನಹಳ್ಳಿ, ಜು. 21 – ತಾಲ್ಲೂಕಿನ ತಿಪ್ಪನಾಯಕನಹಳ್ಳಿ ಕೆರೆಗೆ ತುಂಗಭದ್ರಾ ನದಿ ನೀರು ಸರಬರಾಜು ಪ್ರಥಮ ಬಾರಿಗೆ ಆಯಿತು. ಕೆರೆಗೆ ಬಾಗಿನ ಅರ್ಪಣೆ ಮಾಡುವುದರ ಮೂಲಕ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ದಿವಂಗತ ಎಂ. ಪಿ. ರವೀಂದ್ರ ಅವರನ್ನು ಗ್ರಾಮದ ಜನತೆ ಸ್ಮರಿಸಿಕೊಂಡರು. ಶಾಸಕರಾದ ಲತಾ ಮಲ್ಲಿಕಾರ್ಜುನ್ರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್. ಡಿ. ಎಂ. ಸಿ. ಅಧ್ಯಕ್ಷ ಚಿಗಟೇರಿ ಆನಂದ, ಗ್ರಾಮ ಪಂಚಾಯತ್ ಸದಸ್ಯರಾದ ಹೆಚ್ ಕೊಟ್ರೇಶಪ್ಪ, ಛಲವಾದಿ ಪಕ್ಕೀರಪ್ಪ, ಕೆ. ದುರುಗಮ್ಮ, ಗ್ರಾಮದ ಹಿರಿಯ ಗುಡ್ಡಪ್ಪ, ಮುಖಂಡರಾದ ಕೆ.ತಿಮ್ಮಪ್ಪ, ಹೆಚ್. ಮಂಜಪ್ಪ, ಎಂ. ಪರಮೇಶಪ್ಪ, ಡಿ. ಹನುಮಂತಪ್ಪ, ಕೆ. ಶಿವಪ್ಪ, ಸಿ. ಬಸವರಾಜ, ಎಂ. ಪಕ್ಕೀರಪ್ಪ, ಆರ್. ಪಕ್ಕೀರಪ್ಪ, ಬಿ. ಕೃಷ್ಣ, ಟಿ. ವಸಂತ, ಕೆ.ದೊಡ್ಡವೀರಪ್ಪ, ಬಿ. ದ್ಯಾಮಪ್ಪ, ಕೆ. ಸಿದ್ದಪ್ಪ, ಕೆ. ಬಿ. ಪರುಸಪ್ಪ, ಕೆ. ಬಿ. ಬಸಪ್ಪ, ಶಿಕ್ಷಕರಾದ ಮಂಜುನಾಥ್ ಪೂಜಾರ್, ಎ.ಚಂದ್ರಪ್ಪ, ಆರ್. ಎಸ್. ಮಂಜುನಾಥ, ಕೆ.ಟಿ. ಕುಸುಮ ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.