ರಾಣೇಬೆನ್ನೂರು, ಜು. 19 – ಇಲ್ಲಿನ ವರ್ತಕರ ಸಂಘ, ಇನ್ನರ್ ವ್ಹೀಲ್ ಹಾಗೂ ಗೋಗ್ರೀನ್ ಸಂಸ್ಥೆ ಸೇರಿ ನಗರ ಸೌಂದರ್ಯ ಹೆಚ್ಚಿಸಲು 5 ನೂರು ವಿವಿಧ ಬಣ್ಣಗಳ ಹೂವು ಬಿಡುವ ಹಾಗೂ ಇತರೆ ಅಲಂಕಾರಿಕ ಗಿಡಗಳು ಸೇರಿದಂತೆ ಒಟ್ಟು 1 ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮ ಯೋಜಿಸಿದ್ದು , ಪ್ರಕಾಶಾನಂದ ಸ್ವಾಮಿಗಳು ಚಾಲನೆ ನೀಡಿದರು. ಸಂಜನ ಕುರವತ್ತಿ, ಸುಮಾ ಹೊಟ್ಟಿಗೌಡ್ರ, ಸುಮಾ ಉಪ್ಪಿನ, ಪ್ರತಿಭಾ ಜಂಬಗಿ, ಎಚ್.ಎನ್. ದೇವಕುಮಾರ, ಜಿ.ಜಿ. ಹೊಟ್ಟಿಗೌಡ್ರ, ಡಾ. ಬಸವರಾಜ ಕೇಲಗಾರ, ಡಾ. ಗಿರೀಶ ಕೆಂಚಪ್ಪನವರ, ವೀರೇಶ ಮೋಟಗಿ, ಬಸವಪ್ರಭು ಪಾಟೀಲ ಮತ್ತಿತರರಿದ್ದರು.
January 16, 2025