ದಾವಣಗೆರೆ, ಜು. 19- ವಿದ್ಯುತ್ ಸ್ಪರ್ಷದಿಂದಾಗಿ ಎರಡು ಕೋತಿಗಳು ಸಾವನ್ನಪ್ಪಿದ ಘಟನೆ ಹಳೇ ಕುಂದುವಾಡದಲ್ಲಿ ಶುಕ್ರವಾರ ನಡೆಯಿತು. ಆಟವಾಡುತ್ತಿದ್ದ ತಾಯಿ ಹಾಗೂ ಮರಿ ಕೋತಿಗೆ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲಿಯೇ ಸಾವನ್ನಪ್ಪಿದವು. ಈ ವೇಳೆ ಗ್ರಾಮದ ಯುವಕರು ಅವುಗಳಿಗೆ ಪೂಜೆ ಸಲ್ಲಿಸಿ ಜೈ ಭಜರಂಗಿ ಎಂದು ಘೋಷಣೆ ಕೂಗುತ್ತಾ ಆಟೋದಲ್ಲಿ ಮೆರವಣಿಗೆ ನಡೆಸಿ ನಂತರ ಅಂತ್ಯಕ್ರಿಯೆ ನಡೆಸಿದರು.
January 15, 2025