ಹರಿಹರ : ಶೈಕ್ಷಣಿ ಬೆಳವಣಿಗೆಗೆ ಕ್ರೀಡೆ ಸಹಕಾರಿ

ಹರಿಹರ : ಶೈಕ್ಷಣಿ ಬೆಳವಣಿಗೆಗೆ ಕ್ರೀಡೆ ಸಹಕಾರಿ

ಹರಿಹರ, ಜು. 19 –  ಆರೋಗ್ಯದ ದೃಷ್ಷಿಯಿಂದ ಕ್ರೀಡೆ ಸಹಕಾರಿಯಾಗುತ್ತದೆ. ಅದರೊಂದಿಗೆ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಬೆಳವಣಿಗೆಗೂ ಕ್ರೀಡಾ ಚಟುವಟಿಕೆ  ಸಹಕರಿಸಲಿದೆ ಎಂದು ರಾಷ್ಟ್ರಮಟ್ಟದ ವಾಲಿಬಾಲ್ ಕ್ರೀಡಾಪಟು ಇಮ್ತಿಯಾಜ್ ಅಹಮದ್ ಅವರು ಅಭಿಪ್ರಾಯಪಟ್ಟದರು. 

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗಾಗಿ ಮೊನ್ನೆ ಆಯೋಜಿಸಿದ್ದ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. 

ಸರ್ಕಾರವು ಇಂದು ಕ್ರೀಡಾಪಟುಗಳಿಗೆ ಯುವಜನ ಮತ್ತು ಕ್ರೀಡಾ ಇಲಾಖೆಯ ಮೂಲಕ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದ್ದು, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಹಾಯವಾಗುವ ಅನುಕೂಲಗಳನ್ನು ಕ್ರೀಡಾ ಕೋಟಾದ ಅಡಿಯಲ್ಲಿ ಯುವಕರು ಪಡೆಯಬಹುದಾಗಿದೆ. ಆಮೂಲಕ ತಮಗಾಗಿ ಹಗಲು- ರಾತ್ರಿ ಪರಿಶ್ರಮ ಪಡುವ ತಮ್ಮ ಪೋಷರಿಗೆ ಕೀರ್ತಿ ತರುವಂತೆ ಯುವಕರಿಗೆ ಕಿವಿಮಾತು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಐಕ್ಯೂಎಸಿ ಸಹ ಸಂಚಾಲಕರಾದ ಡಾ.ಅನಂತನಾಗ್ ಹೆಚ್.ಪಿ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಯ ಮನೋಭಾವ ಬೆಳೆಸಿಕೊಳ್ಳಬೇಕು. ಆ ಮೂಲಕ ವಿದ್ಯಾರ್ಥಿ ಜೀವನ ಸಾರ್ಥಕಗೊಳಿಸಿಕೊಳ್ಳುವಂತೆ ತಿಳಿಹೇಳಿದರು.

ಕಾಲೇಜಿನ ಗ್ರಂಥಪಾಲಕರಾದ ಚಿದಾನಂದಪ್ಪ, ಸಹ ಪ್ರಾಧ್ಯಾಪಕರಾದ ಡಾ.ಕುಮಾರ್ ಎಂ, ಡಾ.ಗೌರಮ್ಮ ಎಸ್.ಎಂ, ಡಾ.ಬಾಬು ಕೆ.ಎ, ಡಾ.ತಿಪ್ಪೇಸ್ವಾಮಿ ಹೆಚ್, ಡಾ.ದೂಪಹಳ್ಳಿ ಬಸವರಾಜ, ಡಾ.ಎಸ್.ತಿರುಮಲೇಶ್, ಡಾ.ದ್ರಾಕ್ಷಾಯಿಣಿ ಜಿ.ಎನ್, ಡಾ.ಮಮತಾ ಹೆಚ್. ಸಾಹುಕಾರ್, ಲಕ್ಷ್ಮಣನಾಯ್ಕ ಆರ್, ಮಂಜುನಾಥ ನರಸಗೊಂಡ, ಡಾ.ಯತೀಶ್ ಎಲ್.ಕೋಡಾವತ್ ಅವರುಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬಿ.ಎ ವಿದ್ಯಾರ್ಥಿನಿ ಅರ್ಪಿತಾ ಪ್ರಾರ್ಥಿಸಿದರು. ಬಿ.ಕಾಂ ವಿದ್ಯಾರ್ಥಿನಿ ಎಂ.ಎನ್.ಲತಾ ಅವರು ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಚಂದ್ರಶೇಖರ್.ಸಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರ್ವಹಿಸಿದರು. ಬಿ.ಕಾಂ ವಿದ್ಯಾರ್ಥಿನಿ ಆಶ್ಲೇಷಾ ಅವರು ವಂದಿಸಿದರು.

error: Content is protected !!