ದಾವಣಗೆರೆ, ಜು. 18 – ನಗರದ ಶ್ರೀ ರಾಮಕೃಷ್ಣ ಇಂಟರ್ ನ್ಯಾಷನಲ್ ಶಾಲೆ ಯಲ್ಲಿ ಎಲ್ಲೋ ಡೇ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳು ಹಳದಿ ಬಣ್ಣದ ವಿವಿಧ ಉಡುಪುಗಳನ್ನು ಧರಿಸಿ, ಮಾವಿನ ಹಣ್ಣು, ಬಾಳೆಹಣ್ಣು, ಪೈನಾಪಲ್ ಹಾಗೂ ಮುಂತಾದ ಹಣ್ಣು, ತರಕಾರಿಗಳ ವೇಷ ಹಾಕಿ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಡಿ.ಸಿ. ಸುರೇಶ್, ಸಹ ಶಿಕ್ಷಕಿಯರಾದ ಶೋಭಾ ಹುಲ್ಲುಮನಿ, ಕಾವ್ಯ, ಆಶಾ, ಮಹಾಲಕ್ಷ್ಮಿ, ಅನಿತಾ, ಶ್ರೀದೇವಿ, ತನುಶ್ರೀ, ಕರಿಬಸಮ್ಮ, ವಿದ್ಯಾರ್ಥಿ – ವಿದ್ಯಾರ್ಥಿನಿಯರು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.