ಹರಿಹರ, ಜು. 18 – ಹರ ಪೀಠಾಧ್ಯಕ್ಷ ಲಿಂಗೈಕ್ಯ ಶ್ರೀ ಜಗದ್ಗುರು ಡಾ.ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರ ಕೃಪಾ ಶೀರ್ವಾದದೊಂದಿಗೆ ಯೋಗಸಿಂಹಾಸ ನಾಧೀಶ್ವರ ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಹರ ಶ್ರಾವಣವನ್ನು ಬರುವ ಅಗಸ್ಟ್ 5 ರಿಂದ 10 ವರೆಗೆ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಚಿತ್ರದುರ್ಗ ಜಿಲ್ಲಾ ಘಟಕವು ಆಯೋಜಿಸಿದೆ.
ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ವಿವಿಧ ಹಳ್ಳಿ, ಹೋಬಳಿ, ತಾಲ್ಲೂಕು ಹಾಗೂ ಜಿಲ್ಲೆಯ ಸದ್ಭಕ್ತರ ಮಹಾ ಮನೆಯಲ್ಲಿ ಇಷ್ಟಲಿಂಗ ಮಹಾಪೂಜೆ, ಪಾದಪೂಜೆ, ಸತ್ಸಂಗ, ಸಂಘಟನೆ ಹಾಗೂ ಚಿಂತನ ಮಂಥನ ನೆರವೇರಿಸಲಿದ್ದಾರೆ.
ಸದ್ಭಕ್ತರು ಮುಂಚಿತವಾಗಿ ಚಿತ್ರದುರ್ಗ ಜಿಲ್ಲಾ ಘಟಕಕ್ಕೆ ಸಂಪರ್ಕಿಸಿದರೆ, ತಮ್ಮ ಮಹಾ ಮನೆಗೂ ಜಗದ್ಗುರು ಮಹಾ ಸನ್ನಿಧಿಯವರು ಪಾದಾರ್ಪಣೆ ಮಾಡುವರು.