ದಾವಣಗೆರೆ, ಜು. 18- ಕಲಬುರ್ಗಿಯಲ್ಲಿ ಕಳೆದ ವಾರ ನಡೆದ ಚಿತ್ರಕಲಾ ಶಿಬಿರದಲ್ಲಿ ನಗರದ ಚಿತ್ರ ಕಲಾವಿದ ಹಾಗೂ ರಂಗಭೂಮಿ ಕಲಾವಿದ ರವೀಂದ್ರ ಅರಳಗುಪ್ಪಿ ಭಾಗವಹಿಸಿದ್ದರು. ಶಿಬಿರದಲ್ಲಿ ರಾಷ್ಟ್ರ ಹಾಗೂ ರಾಜ್ಯಮಟ್ಟದ ಹೆಸರಾಂತ 50 ಕಲಾವಿದರು ಭಾಗವಹಿಸಿದ್ದರು. ಡಾ.ವಿ.ಜಿ. ಅಂದಾನಿ ಮೇಷ್ಟ್ರು ಅವರ 75ರ ಸಂಭ್ರಮಾಚರಣೆ ಅಂಗವಾಗಿ ಅಭಿನಂದನಾ ಗ್ರಂಥ ಬಯಲು ಬೆಳಕು ಹಾಗೂ 50 ಕಲಾವಿದರ ಚಿತ್ರ ಕಲಾ ಶಿಬಿರ ಇದಾಗಿತ್ತು.
ಕಲಬುರ್ಗಿ ಚಿತ್ರಕಲಾ ಶಿಬಿರದಲ್ಲಿ ರವೀಂದ್ರ ಅರಳಗುಪ್ಪಿ
