ದಾವಣಗೆರೆ, ಜು.17- ನಗರದ ಮಹಾರಾಜ ಪೇಟೆಯಲ್ಲಿರುವ ಶ್ರೀ ಭಾವಸಾರ ಕ್ಷತ್ರಿಯ ಭಜನಾ ಮಂಡಳಿ ವತಿಯಿಂದ ಬುಧವಾರ ಬೆಳಗ್ಗೆ ಆಷಾಢ ಪಂಡರಾಪುರ ವಾರಿ ಬ್ರಹ್ಮ ರಥೋತ್ಸವದ ಪ್ರಯುಕ್ತ ಸ್ವಾಮಿಗೆ ಅಭಿಷೇಕ, ಕಾಕಡಾರತಿ, ಭಜನೆ ಮತ್ತು ಪಲ್ಲಕ್ಕಿ ಉತ್ಸವ ನೆರವೇರಿತು.
ಭಜನಾ ಮಂಡಳಿ, ದೈವ ಮಂಡಳಿ, ಮಹಿಳಾ ಮಂಡಳಿ, ತರುಣ ಮಂಡಳಿ ಮತ್ತು ಇತರೆ ಅಂಗ ಸಂಸ್ಥೆಗಳ ಸಹಯೋ ಗದಲ್ಲಿ ಶ್ರೀ ಜ್ಞಾನೇಶ್ವರಿ (ಭಗವದ್ಗೀತೆ) ಪಾರಾಯಣ ಹರಿಪಾಠ, ಸಂಜೆ ಕಲಾವತಿ ಮಹಿಳಾ ಮಂಡಳಿಯಿಂದ ಭಜನೆ ಮತ್ತು ರಾತ್ರಿ ಹ.ಭ.ಪ. ರಾಮಕೃಷ್ಣರಾವ್ ನವಲೆ ಇವರಿಂದ ಕೀರ್ತನ ಮತ್ತು ಅಖಂಡ ಜಾಗರಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಭಜನಾ ಮಂಡಳಿ ಅಧ್ಯಕ್ಷ ನಿಂಗಸ್ವಾಮಿರಾವ್ ಖಮಿತ್ಕರ್, ಚಂದ್ರಕಾಂತ್ ವಾದೋನೆ, ವಿನಯ್ ಜಿಂಗಾಡೆ, ವಿನಾಯಕ್ ಟಿಕಾರೆ ಇತರರು ಮತ್ತಿತರರಿದ್ದರು.