ಜಗಳೂರು, ಜು.16- ಶ್ರೀ ರಾಘವೇಂದ್ರ ಆಸ್ಪತ್ರೆಯಲ್ಲಿ ದಿ. ಡಾ.ಎಂ.ಎಚ್ ರಮೇಶ್ ಅವರ 10ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ನಡೆಯಿತು. ಶ್ರೀ ರಾಘವೇಂದ್ರ ಆಸ್ಪತ್ರೆ, ದಾವಣಗೆರೆಯ ಸಿಜಿ ಆಸ್ಪತ್ರೆ, ರಕ್ತ ನಿಧಿ ಭಂಡಾರ ಮತ್ತು ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ಕೇಂದ್ರ ಇವರ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿತ್ತು. ರಾಘವೇಂದ್ರ ಆಸ್ಪತ್ರೆಯ ಮುಖ್ಯಸ್ಥ ಡಾ. ಅನಿರುದ್ಧ್, ಡಾ. ಅರ್ಪಿತಾ, ಡಾ. ಅಕ್ಷಯ್, ಆಪ್ತ ಸಮಾಲೊಚಕ ರಾಘವೇಂದ್ರ, ಐಸಿಟಿಸಿ ವಿಭಾಗದ ಟಿ. ಉಮೇಶ್, ವಿಜಯಲಕ್ಷ್ಮಿ, ರಮೇಶ್ ಮತ್ತಿತರರಿದ್ದರು
December 28, 2024