ಹರಪನಹಳ್ಳಿ, ಜು. 14 – ಬಿಜೆಪಿ ಸಹಕಾರ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯರಾಗಿ ಬಿಜೆಪಿಯ ಜೆ. ಓಂಕಾರ ಗೌಡ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಬಿಜೆಪಿ ಕಛೇರಿಯಲ್ಲಿ ನಡೆದ ಬಿಜೆಪಿ ಸಹಕಾರ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯರಾಗಿ ಪಕ್ಷದ ಜವಾಬ್ದಾರಿಯನ್ನು ನೀಡಿದ ಪ್ರಕೋಷ್ಠದ ಸಂಯೋಜಕ ದತ್ತಾತ್ರೇಯ ರವರಿಗೂ ಮತ್ತು ಸಹ ಸಂಯೋಜಕ ಎನ್.ವಿ. ಪ್ರಣೀಶ್ ರವರಿಗೂ ಹಾಗೂ ಸಹಕಾರ ಪ್ರಕೋಷ್ಠದ ರಾಜ್ಯ ಸಂಚಾಲಕ ಹೆಚ್.ಕೆ. ಶಿವಕುಮಾರ್ ಅವರಿಗೆ ಹಾಗೂ ರಾಜ್ಯ ಸಹ ಸಂಚಾಲಕ ಸಂಜಯ್ ಪಾಟೀಲ್ ಮತ್ತು ರಾಜ್ಯ ಜಿಲ್ಲಾ ಮತ್ತು ಮಂಡಲ ಮುಖಂಡರಿಗೆ ಧನ್ಯವಾದಗಳನ್ನು ಜೆ. ಓಂಕಾರಗೌಡ ತಿಳಿಸಿದ್ದಾರೆ.
ಬಿಜೆಪಿ ಸಹಕಾರ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯರಾಗಿ ಜೆ. ಓಂಕಾರ ಗೌಡ
