ಹೊನ್ನಾಳಿ, ಜು.11- ತಾಲ್ಲೂಕಿನ ಬಸವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸುಜಾತಾ, ಎಂ.ಸಿ.ರೇಣುಕಪ್ಪ ಇವರು 6 ಮತಗಳ ಪಡೆದು ಚುನಾವಣೆ ಮೂಲಕ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕರಾದ ರೇಖಾ ತಿಳಿಸಿರುವರು.
12 ಸದಸ್ಯರಿರುವ ಪಂಚಾಯಿತಿಯಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಪ್ರತಿ ಸ್ಪರ್ಧಿಯಾಗಿ ಸ್ಪಂದಿಸಿದ ಚಂದ್ರಮ್ಮ ನಾಲ್ಕು ಮತಗಳ ಪಡೆದರು, ಇಬ್ಬರು ಸದಸ್ಯರು ತಟಸ್ಥ ನಿಲುವು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಉಪಾಧ್ಯಕ್ಷರಾದ ಪಿ.ಆರ್.ರತ್ನ, ಬಸವನಹಳ್ಳಿ ಗ್ರಾಮದ ಚಂದ್ರಮ್ಮ, ಹೆಚ್.ಎಸ್.ಹಳದಮ್ಮ, ಡಿ.ಹರೀಶ್, ಬಿ.ಜಿ ರಾಜಶೇಖರ್, ಡಿ.ಮಲ್ಲಪ್ಪ, ಹೆಚ್.ಡಿ.ಬಸವರಾಜಪ್ಪ, ಮಾದನಬಾವಿ ಗೀತಾ, ಆರ್.ಎಸ್.ರುದ್ರಪ್ಪ, ಡಿ.ಜಿ.ಸುಜಾತ, ಎಸ್.ಅಶ್ವಿನಿ, ಕೆ.ಎಸ್.ಕೆಂಚಪ್ಪ, ಡಿಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಂದ್ರ, ಕಾಂಗ್ರೆಸ್ ಮುಖಂಡ ಮಾದನಬಾವಿ ರೇಣುಕಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಚನ್ನಯ್ಯ, ಸಿಬ್ಬಂಧಿ ಶೇಖರಪ್ಪ, ರಾಜಪ್ಪ, ಗುಳ್ಳೇಶಪ್ಪ, ಜೈರಾಮ್, ರಮೇಶ್, ಕಲ್ಲೇಶ್ ಇನ್ನಿತರರಿದ್ದರು.