ರಾಣೇಬೆನ್ನೂರು ರೋಟರಿ ಪದಗ್ರಹಣ

ರಾಣೇಬೆನ್ನೂರು ರೋಟರಿ ಪದಗ್ರಹಣ

ರಾಣೇಬೆನ್ನೂರು,ಜು.10- ಇಲ್ಲಿನ ರೋಟರಿ ಹಾಗೂ ಇನ್ನರ್ ವ್ಹೀಲ್ ಸಂಸ್ಥೆಗಳ  2024-25ನೇ ಸಾಲಿಗೆ ಆಯ್ಕೆಯಾದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇದೇ  ದಿನಾಂಕ 13 ರಂದು ಬೆಳಿಗ್ಗೆ ವರ್ತಕರ ಸಮುದಾಯ ಭವನದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಶಾಸಕ ಪ್ರಕಾಶ ಕೋಳಿವಾಡ ಮತ್ತು ಜಿಲ್ಲಾ ಸಹಾಯಕ ರಾಜ್ಯಪಾಲ ಮಂಜುನಾಥ ಉಪ್ಪಾರ ಆಗಮಿಸುವರು.

ರೋಟರಿ ಪಿಡಿಜಿ  ಪ್ರಾಣೇಶ ಜಹಗೀರದಾರ ಅವರು ರೋಟರಿ ಅಧ್ಯಕ್ಷ ವೀರೇಶ ಮೊಟಗಿ, ಕಾರ್ಯದರ್ಶಿ ಪ್ರಕಾಶ ಮಾಳಗಿ ಸಂಗಡಿಗರಿಗೆ ಹಾಗೂ ಇನ್ನರ್ ವ್ಹೀಲ್ ಅಧ್ಯಕ್ಷೆ ಸಂಜನಾ ಕುರುವತ್ತಿ, ಕಾರ್ಯದರ್ಶಿ ಪ್ರಮೀಳಾ ಜಂಬಗಿ ತಂಡದವರಿಗೆ ಪ್ರಮಾಣ ವಚನ ಬೋಧಿಸುವರು.

error: Content is protected !!