ವಿಶ್ವಚೇತನ ಶಾಲೆಯಲ್ಲಿ ವಿದ್ಯಾರ್ಥಿ ಪರಿಷತ್ತಿನ ಪದಗ್ರಹಣ

ವಿಶ್ವಚೇತನ ಶಾಲೆಯಲ್ಲಿ ವಿದ್ಯಾರ್ಥಿ ಪರಿಷತ್ತಿನ ಪದಗ್ರಹಣ

ದಾವಣಗೆರೆ, ಜು. 9 – ನಗರದ ವಿಶ್ವಚೇತನ ವಿದ್ಯಾನಿಕೇತನ ವಸತಿ ವಸತಿಯುತ ಪ್ರೌಢ ಶಾಲೆಯಲ್ಲಿ ನೂತನವಾಗಿ ನಡೆಸಲಾದ ವಿದ್ಯಾರ್ಥಿ ಪರಿಷತ್ ಚುನಾವಣೆಯಲ್ಲಿ ಆಯ್ಕೆಯಾದ ಪ್ರತಿನಿಧಿಗಳಿಗೆ ವಿದ್ಯಾರ್ಥಿ ಪರಿಷತ್ತಿನ ಪದಗ್ರಹಣ ಸಮಾರಂಭವನ್ನು ಆಯೋಜಿಸಲಾಗಿತ್ತು. ಚೇತನ ಸಮೂಹ ಶಾಲೆಗಳ ಅಕಾಡೆಮಿಕ್ ಡೀನ್ ಸುಬ್ಬರಾವ್ ಶಾಲಾ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು.

ಶಾಲೆಯ ಆಡಳಿತಾಧಿಕಾರಿ ಶ್ರೀಮತಿ ಪ್ರೀತಿ, ಚೇತನಾ ವಸತಿ ಪಿಯು ಕಾಲೇಜು ಪ್ರಾಂಶುಪಾಲ ಜಿ. ವಿನೋದ್, ಚೇತನ ಸಿಬಿಎಸ್‌ಇ ಪ್ರಾಂಶುಪಾಲ ಪ್ರಕಾಶ್ ಜೋಗಿ, ರಾಜ್ಯ ಪಠ್ಯಕ್ರಮದ ಮುಖ್ಯೋಪಾಧ್ಯಾಯ ಬಿ.ಎಂ. ಬಸವರಾಜಯ್ಯ, ಉಪ ಪ್ರಾಂಶುಪಾಲ ಯುವರಾಜ್ ಕಾಂಭ್ಳೆ  ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶಾಲಾ ಪರಿಷತ್ ಸಮಿತಿಯ ನಾಯಕನಾಗಿ ಎನ್. ವಿಜಯ್ ನಾಯಕಿಯಾಗಿ ಪಿ. ಶ್ರೇಯಾ, ಆರೋಗ್ಯ ಮತ್ತು ನೈರ್ಮಲ್ಯ ಸಚಿವನಾಗಿ ಕು. ಜಿ.ಕೆ. ವಿಶ್ವನಾಥ್, ಸಹ ಸಚಿವೆಯಾಗಿ ಕು. ಪೂರ್ವಿಕ, ಶಿಸ್ತು ಸಮಿತಿಯ ಸಚಿವನಾಗಿ ಕು. ವಿ. ಯುವರಾಜ್ ನಾಯ್ಡು, ಉಪ ಸಚಿವನಾಗಿ ಮಾನಸ್ ಮಲ್ಲಿಕ್, ಉಪ ಸಚಿವೆಯಾಗಿ ಕು. ಪ್ರೇರಣಾ. ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷನಾಗಿ ಕು. ಭಾರ್ಗವ್, ಉಪಾಧ್ಯಕ್ಷ ಹಾಗೂ ಸಾಂಸ್ಕೃತಿಕ ಸಚಿವರಾಗಿ ಕು.  ಎನ್.ಟಿ. ಭರತ್, ಎನ್.
ಹರ್ಷ, ಶಿಸ್ತು ಸಮಿತಿಯ ಸಚಿವರಾಗಿ ಕು. ಪವನ್ ಗೌಡ, ಕು. ಸಿದ್ದಾರ್ಥ್, ಕು. ಪ್ರೀತಮ್, ಕು. ಪ್ರಜ್ವಲ್, ಕು. ಮಿಥುನ್ ಹಾಗೂ ಐಶ್ವರ್ಯ ಅವರು ಆಯ್ಕೆಯಾಗಿದ್ದಾರೆ. ಶಾಲಾ ಪ್ರಾಂಶುಪಾಲ ಪ್ರಕಾಶ್ ಜೋಗಿ ಅವರು ಎಲ್ಲಾ ಪ್ರತಿನಿಧಿಗಳಿಗೆ ಪ್ರಮಾಣ ವಚನ ಬೋಧಿಸಿದರು. 

error: Content is protected !!