ದಾವಣಗೆರೆ, ಜು. 8 – ಎಸ್. ಎಸ್. ಕೇರ್ ಟ್ರಸ್ಟ್ ಹಾಗೂ ಎಸ್ ಎಸ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಹೆರಿಗೆ ಮತ್ತು ಪ್ರಸೂತಿ ವಿಭಾಗದ ವತಿಯಿಂದ ಹೆಚ್ಪಿವಿ (ಹ್ಯೂಮನ್ ಪಾಪಿಲ್ಲೋಮ ವೈರಸ್) ವಿರುದ್ಧ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಹೆಚ್ಪಿವಿ ವೈರಸ್ ಮಹಿಳೆಯರ ಗರ್ಭಗೊರಳಿನ ಕ್ಯಾನ್ಸರ್ಗೆ ಕಾರಣವಾಗಿದ್ದು, ಅದನ್ನು ಲಸಿಕೆಯ ಮೂಲಕ ತಡೆಗಟ್ಟುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯ ಕ್ರಮದಲ್ಲಿ ಸಂಸದರಾದ ಶ್ರೀಮತಿ ಡಾ. ಪ್ರಭಾ ಮಲ್ಲಿಕಾರ್ಜುನ್ ಭಾಗವಹಿಸಿದ್ದರು.
ಕೇಂದ್ರ ಸರ್ಕಾರದಿಂದ ಹೆಚ್ಪಿವಿ ಲಸಿಕೆಯ ಅಭಿಯಾನ ಪ್ರಾರಂಭಿಸುವ ವಿಚಾರ, ಇತ್ತೀಚೆಗೆ ಸಂಸತ್ತಿನಲ್ಲಿ ಮಂಡನೆ ಯಾದ ವಿಷಯವನ್ನು ತಿಳಿಸಿದ ಸಂಸದರಾದ ಪ್ರಭಾ ಅವರು, ಎಸ್ ಎಸ್ ಕೇರ್ ಟ್ರಸ್ಟ್ ಈ ವಿಚಾರವನ್ನು ಹಲವು ವರ್ಷಗಳ ಹಿಂದೆಯೇ ಚರ್ಚಿಸಿದ್ದು, ಲಸಿಕೆ ಅಭಿಯಾನ ಪ್ರಾರಂಭಿ ಸುವ ಮೂಲಕ ನಾವು ಹತ್ತು ಹೆಜ್ಜೆ ಮುಂದೆ ಇದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್.ಎಸ್. ವೈದ್ಯ ಕೀಯ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಶಶಿಕಲಾ ಪಿ., ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಡಾ. ಮೂಗನ ಗೌಡ ಪಾಟೀಲ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ಸಿ. ಎಸ್. ವಿನೋದ್ ಕುಮಾರ್ ಹಾಗೂ ಇತರರು ಭಾಗವಹಿಸಿದ್ದರು.
250ಕ್ಕೂ ಹೆಚ್ಚು ಮಹಿಳೆಯರಿಗೆ ಹೆಚ್ ಪಿ ವಿ ಲಸಿಕೆ ಹಾಕಲಾಯಿತು. ಮುಂದಿನ ವರ್ಷದೊಳಗೆ ಸಾಧ್ಯವಾದಷ್ಟು ಹೆಚ್ಚು ಹೆಚ್ಚು ಜನರಿಗೆ ಲಸಿಕೆಯನ್ನು ತಲುಪಿಸುವ ಪ್ರತಿಜ್ಞೆಯನ್ನು ಕೈ ಗೊಂಡರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಬಿ ಎಸ್ ಪ್ರಸಾದ್ ಸ್ವಾಗತಿಸಿದರು. ಪ್ರಸೂತಿ ವಿಭಾಗದ ಮುಖ್ಯಸ್ಥರಾದ ಡಾ. ಗಾಯತ್ರಿ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈದ್ಯಕೀಯ ನಿರ್ದೇಶಕರಾದ ಡಾ. ಅರುಣ್ ಕುಮಾರ್ ಅಜ್ಜಪ್ಪ ವಂದಿಸಿದರು.