ಉಚ್ಚಂಗಿದುರ್ಗ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಗಂಗಮ್ಮ ರಮೇಶ್ ಆಯ್ಕೆ

ಉಚ್ಚಂಗಿದುರ್ಗ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಗಂಗಮ್ಮ ರಮೇಶ್ ಆಯ್ಕೆ

ಹರಪನಹಳ್ಳಿ, ಜು. 8 – ಶಿಲ್ಪ ಉಮೇಶ್‌ ನಾಯ್ಕ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗಂಗಮ್ಮ ರಮೇಶ್ 13 ಮತಗಳನ್ನು ಪಡೆದು ಜಯ ಗಳಿಸಿದರೆ, ಪ್ರತಿಸ್ಪರ್ಧಿ ರೇಣುಕಮ್ಮ 12 ಮತ ಪಡೆದು ಸೋಲುಂಡರು ಎಂದು ಚುನಾವಣೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತಹಶೀಲ್ದಾರ್ ಗಿರೀಶ್ ಬಾಬು ತಿಳಿಸಿದರು.

ಚುನಾವಣೆಯಲ್ಲಿ ವಿಜೇತರಾದ ಗಂಗಮ್ಮ ರಮೇಶ್ ಅವರ ಬೆಂಬಲಿಗರು, ಗ್ರಾಮಸ್ಥರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮುಖಂಡ ಶಿವಕುಮಾರ್ ಸ್ವಾಮಿ, ರಾಜಶೇಖರ ಗೌಡ, ಮಹಾಂತೇಶ್ ನಾಯ್ಕ, ಹಾಲಪ್ಪ, ಟಿ. ಮಂಜಪ್ಪ, ಹೆಚ್. ಸಿದ್ದಪ್ಪ, ಉಮೇಶ್ ನಾಯ್ಕ್, ಎಂ. ಸಿದ್ದಪ್ಪ, ಮೂಗಪ್ಪ, ಶೇಖರಪ್ಪ, ಪಿಡಿಓ ಎನ್. ಪರಮೇಶ್ವರಪ್ಪ, ಸಿಬ್ಬಂದಿ ರಾಜಣ್ಣ, ದಂಡ್ಯಪ್ಪ ಹಾಗೂ ಇತರರು ಭಾಗಿಯಾಗಿದ್ದರು.

error: Content is protected !!