ಮಲೇಬೆನ್ನೂರು, ಜು.7- ಇಲ್ಲಿನ ಪೊಲೀಸ್ ಠಾಣೆಯ ಮೈದಾನದಲ್ಲಿ ಮಲೇಬೆನ್ನೂರು ಲಯನ್ಸ್ ಕ್ಲಬ್ ಮತ್ತು ಅರಣ್ಯ ಇಲಾಖೆ ವತಿಯಿಂದ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಆರ್.ಶಶಿಧರ್, ಎಸಿಎಫ್ ಶ್ರೀಮತಿ ಭಾಗ್ಯಲಕ್ಷ್ಮಿ, ಆರ್‌ಎಫ್‌ಓ ಎಸ್.ವಿ.ಮಂಜುನಾಥ್, ಪೊಲೀಸ್ ಇನ್‌ಸ್ಪೆಕ್ಟರ್ ಸುರೇಶ್ ಸಗರಿ, ಪಿಎಸ್ಐ ಪ್ರಭು ಕೆಳಗಿನಮನಿ, ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್, ಉಪತಹಶೀಲ್ದಾರ್ ಆರ್.ರವಿ, ಲಯನ್ಸ್ ಕ್ಲಬ್ ಅಧ್ಯಕ್ಷ ಚಿಟ್ಟಕ್ಕಿ ನಾಗರಾಜ್ ಅವರುಗಳು ಗಿಡಗಳನ್ನು ನೆಟ್ಟು ನೀರು ಹಾಕುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು.
ಈ ವೇಳೆ ರೈತ ಸಂಘದ ಬಲ್ಲೂರು ರವಿ ಕುಮಾರ್ ಅವರು, ಪರಿಸರದ ಮಹತ್ವ ಹಾಗೂ ಸಂರಕ್ಷಣೆ ಕುರಿತು ಪ್ರತಿಜ್ಞಾ ವಿಧಿ ಭೋದಿಸಿದರು.
ಐಎಂಎ ಅಧ್ಯಕ್ಷ ಡಾ. ಬಿ.ಚಂದ್ರಶೇಖರ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಸಿರಿಗೆರೆ ಸಿದ್ದಪ್ಪ, ಖಜಾಂಚಿ ಭರ್ಮಳ್ಳಿ ಮಂಜುನಾಥ್, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾದ ಓ.ಜಿ.ರುದ್ರಗೌಡ್ರು, ಎನ್.ಜಿ.ಬಸವನಗೌಡ್ರು, ಶ್ರೀಮತಿ ರೂಪಾ ಪಾಟೀಲ್, ರೈತ ಸಂಘದ ಕೋಗಳಿ ಮಂಜುನಾಥ್, ಬೆಣ್ಣೆಹಳ್ಳಿ ಬಸವರಾಜ್, ಹೊಸಳ್ಳಿ ಕರಿಬಸಪ್ಪ, ಜಿಗಳಿ ಜಿ.ಎಂ.ಬಸವನಗೌಡ, ಡಿಪೋ ಉಪವಲಯ ಅರಣ್ಯಾಧಿಕಾರಿ ಸತೀಶ್ ಎಸ್.ಕಣವಿ, ಗಸ್ತು ಅರಣ್ಯ ಪಾಲಕ ಎಸ್.ಸದನ, ಬಸವ ಬಳಗದ ಅಧ್ಯಕ್ಷ ವೈ.ನಾರೇಶಪ್ಪ, ಅಕ್ಕನ ಬಳಗದ ಶ್ರೀಮತಿ ರಾಜೇಶ್ವರಿ, ಶ್ರೀಮತಿ ವನಜಾಕ್ಷಮ್ಮ ಹಾಲೇಶಪ್ಪ, ಗೌಡ್ರ ಮಂಗಳಮ್ಮ ಸೇರಿದಂತೆ ಇತರರು ಪಾಲ್ಗೊಂಡಿದ್ದರು.