ದಾವಣಗೆರೆ, ಜು. 5- ಸ್ಥಳೀಯ ವಿದ್ಯಾನಗರ ರೋಟರಿ ಸಂಸ್ಥೆ ಹಾಗೂ ಇನ್ನರ್ವ್ಹೀಲ್ ಸಂಸ್ಥೆಯ 2024-25ನೇ ಸಾಲಿನ ಪದಗ್ರಹಣ ಕಾರ್ಯಕ್ರಮವು ನಾಳೆ ದಿನಾಂಕ 6ರ ಶನಿವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಅತಿಥಿಗಳಾಗಿ ಸಾಧು ಗೋಪಿನಾಥ, ಶ್ರೀಮತಿ ಭಾಗ್ಯಲಕ್ಷ್ಮಿ ಉಪಸ್ಥಿತರಿರುವರು. ಇನ್ನರ್ವ್ಹೀಲ್ ಅಧ್ಯಕ್ಷರಾಗಿ ಪ್ರೇಮ ಮಹೇಶ್ವರಪ್ಪ, ಕಾರ್ಯದರ್ಶಿಯಾಗಿ ಭಾಗ್ಯವೀರಣ್ಣ, ಖಜಾಂಚಿಯಾಗಿ ರೇಣುಕಾದೇವಿ, ಐಎಸ್ಓ ಆಗಿ ಉಷಾ ಪದಗ್ರಹಣ ಮಾಡುವರು. ರೋಟರಿ ಸಂಸ್ಥೆಯ ಅಧ್ಯಕ್ಷರಾಗಿ ಎಸ್.ಎನ್. ಮನುವಳ್ಳಿ, ಕಾರ್ಯದರ್ಶಿಯಾಗಿ ಹೆಚ್. ಆಂಜನೇಯಮೂರ್ತಿ ಪದಗ್ರಹಣ ಮಾಡುವರು.
January 13, 2025