ದಾವಣಗೆರೆ, ಜು.4- ದ್ವಿಚಕ್ರ ವಾಹನ ತಯಾರಿಕೆ ಯಲ್ಲಿ ಹೆಸರಾಗಿರುವ ಹೀರೋ ಕಂಪನಿಯು ಇದೀಗ ಎಲೆಕ್ಟ್ರಿಕಲ್ ವಾಹನವನ್ನು ಪರಿಚಯಿಸಿದ್ದು, `ವಿಡಾ’ ಹೆಸರಿನ ಈ ವಾಹನ ಮಾರುಕಟ್ಟೆಯಲ್ಲೀಗ ಬೇಡಿಕೆಯಲ್ಲಿದೆ.
ನಗರದ ಹೀರೋ ಕಂಪನಿಯ ವಿತರಕರಾದ ಪಿ.ಬಿ. ರಸ್ತೆಯ ಪ್ರಕಾಶಾ ಮೋಟರ್ಸ್ನಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ `ವಿಡಾ’ ಎಲೆಕ್ಟ್ರಿಕಲ್ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.
ಪ್ರಕಾಶ್ ಮೋಟರ್ಸ್ನ ಶ್ರೀಮತಿ ಆಶಾಲತಾ ಜೆ. ಅಂಬರ್ಕರ್ ಅವರು `ವಿಡಾ’ ವಾಹನವನ್ನು ಬಿಡುಗಡೆ ಮಾಡಿದರು. ಪಾಲುದಾರ ರಘುನಂದನ್ ಜೆ. ಅಂಬರ್ಕರ್ ಅವರು ಮೊದಲ `ವಿಡಾ’ ಎಲೆಕ್ಟ್ರಿಕ್ ವಾಹನದ ಕೀ ಅನ್ನು ಗ್ರಾಹಕರಿಗೆ ಹಸ್ತಾಂತರಿಸಿದರು.
ಪಾಲುದಾರರಲ್ಲೊಬ್ಬರಾದ ನರೇಶ್ ಅಂಬರ್ಕರ್, ವ್ಯವಸ್ಥಾಪಕ ಐ.ಎಂ.ಸಿದ್ದಲಿಂಗಸ್ವಾಮಿ, ಪ್ರಕಾಶಾ ಮೋಟಾರ್ಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.