ಕಾಯಕದಲ್ಲಿ ಶ್ರದ್ಧೆ, ನಿಷ್ಟೆ ಇದ್ದಾಗ ಸುಖ, ಶಾಂತಿ

ಕಾಯಕದಲ್ಲಿ ಶ್ರದ್ಧೆ, ನಿಷ್ಟೆ ಇದ್ದಾಗ ಸುಖ, ಶಾಂತಿ

ಕಣಕುಪ್ಪಿ ಗವಿಮಠದ ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ

ಹರಿಹರ, ಜು.3-  ನಾವು ಮಾಡುವಂತಹ ಕಾಯಕದಲ್ಲಿ ಶ್ರದ್ಧೆ, ಭಕ್ತಿ, ನಿಷ್ಠೆ, ತ್ಯಾಗ, ಸದಾಚಾರ, ಸದ್ಭಾವನಾ ಗುಣಗಳು ಇದ್ದಾಗ,   ಭಗವಂತನು ನಮಗೆ  ಆಶೀರ್ವಾದದ ರೂಪದಲ್ಲಿ ಬೇಡಿದ ಫಲಗಳನ್ನು ನೀಡುತ್ತಾನೆ ಎಂದು ಕಣಕುಪ್ಪಿ ಗವಿಮಠದ ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಹೊರವಲಯದ ಮಾಕನೂರು ಕ್ರಾಸ್ ಬಳಿ ರಾಣೇಬೆನ್ನೂರಿನ ಮಾಜಿ ಶಾಸಕ ಅರುಣಕುಮಾರ್ ಪೂಜಾರ್ ಮತ್ತು ಸಹೋದರರ ಎಂ.ಎಂ.ಪಿ ಬ್ರಿಕ್ಸ್ ಕಂಪನಿಯ ಪ್ರಾರಂಭೋತ್ಸವ ಸಮಾರಂಭದಲ್ಲಿ ಸಾನ್ನಿಧ್ಯ  ವಹಿಸಿ ಶ್ರೀಗಳು ಮಾತನಾಡಿದರು.

ಮನೆಗಳಲ್ಲಿ ಪ್ರತಿಯೊಬ್ಬರೂ  ಪೂಜೆ, ಧ್ಯಾನ,   ಧರ್ಮ ಕಾರ್ಯ ಮಾಡುತ್ತಾ ಬಂದಾಗ, ಎಲ್ಲಾ ಕೆಲಸಗಳಲ್ಲಿ  ಯಶಸ್ಸು ಲಭಿಸುತ್ತವೆ. ಮನುಷ್ಯನಿಗೆ ಭಕ್ತಿ ಭಾವ ಬರಬೇಕಾದರೆ, ಪೂರ್ವಜರು ಮಾಡಿದ ಪುಣ್ಯ ಕೆಲಸಗಳಿಂದ ಮತ್ತು ನಾವು ಮಾಡುವಂತಹ ಎಲ್ಲಾ ಕೆಲಸಗಳಲ್ಲಿ ಸುಕೃತ ಮನಸ್ಸು ಇದ್ದಾಗ ಯಶಸ್ಸು ಕಾಣಲಿಕ್ಕೆ ಸಾಧ್ಯವಾಗುತ್ತದೆ ಎಂದು ಶ್ರೀಗಳು ಪ್ರತಿಪಾದಿಸಿದರು. 

ಮನುಷ್ಯನಿಗೆ ಒಳ್ಳೆಯ ಸದ್ಗುಣ, ಸಂಸ್ಕಾರ ಹಾಗೂ ಭಾವನಾತ್ಮಕ ಭಾವನೆಗಳ ಜೊತೆಗೆ ಬುದ್ಧಿವಂತಿಕೆ ಮತ್ತು ಅಧ್ಯಾತ್ಮಿಕತೆಯ ಒಲವು ಇದ್ದಾಗ ಅಂತಹ ವ್ಯಕ್ತಿ ಸಮಾಜದಲ್ಲಿ ಎಲ್ಲರಿಂದಲೂ ಗೌರವಿಸಲ್ಪಡುವಂತ  ವ್ಯಕ್ತಿಯಾಗಿ, ಯಶಸ್ವಿಯಾಗುತ್ತಾನೆ ಎಂದು ಹೇಳಿದರು.  

ಮಾಜಿ ಶಾಸಕ ಅರುಣಕುಮಾರ್ ಮಾತನಾಡಿ,  ಬಹಳಷ್ಟು ಸವಾಲುಗಳನ್ನು ಮತ್ತು ಸಂಕಷ್ಟದ ದಿನಗಳನ್ನು ಎದುರಿಸಿದ ಫಲವಾಗಿ ಇಂದು ನಮ್ಮ ಕನಸು ನನಸು ಮಾಡಲಿಕ್ಕೆ ಸಾಧ್ಯವಾಗಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಪುಣ್ಯಕೋಟಿ ಮಠದ ಶ್ರೀ ಜಗದೀಶ್ವರ ಸ್ವಾಮೀಜಿ. ಮಾಜಿ ಸಚಿವರಾದ ಬಿ.ಸಿ. ಪಾಟೀಲ್, ಪಿ.ಟಿ. ಪರಮೇಶ್ವರ ನಾಯ್ಕ್, ದಾವಣಗೆರೆಯ ಜವಳಿ ಉದ್ಯಮಿ ಬಿ.ಸಿ. ಉಮಾಪತಿ ಹಾಗೂ ಇತರರು ಹಾಜರಿದ್ದರು. 

error: Content is protected !!