ಪಠ್ಯದಲ್ಲಿ ಕಂಪ್ಯೂಟರ್‌ ಸೈನ್ಸ್‌ ವಿಷಯ ಸೇರಿಸಲು ಮನವಿ

ಪಠ್ಯದಲ್ಲಿ ಕಂಪ್ಯೂಟರ್‌ ಸೈನ್ಸ್‌ ವಿಷಯ ಸೇರಿಸಲು ಮನವಿ

ಬೆಂಗಳೂರು, ಜು.3- ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಕಾಡೆಮಿಕ್‌ ಸಮಿತಿಯು ಬಿ.ಕಾಂ ಪದವಿಯ ಪಠ್ಯಕ್ರಮದಲ್ಲಿ ಕಂಪ್ಯೂಟರ್‌ ಸೈನ್ಸ್‌ ವಿಷಯ ಸೇರಿಸಬೇಕು ಎಂದು ವಿವಿಯ ಕುಲಪತಿಗಳಿಗೆ, ಪ್ರದೇಶ ಕಾಂಗ್ರೆಸ್‌ ಸಮಿತಿಯ ಶಿಕ್ಷಕರು ಹಾಗೂ ಪದವೀಧರ ಘಟಕದ ಮಾಜಿ ರಾಜ್ಯಾಧ್ಯಕ್ಷ ಡಾ.ಆರ್‌.ಎಂ ಕುಬೇರಪ್ಪ ಒತ್ತಾಯಿಸಿದ್ದಾರೆ.

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿಗೆ ಮಂಗಳವಾರ ಭೇಟಿ ನೀಡಿ ಅಲ್ಲಿನ ಕುಲಪತಿಗಳು, ಡೀನ್‍ಗಳು, ಛೇರ್ಮನ್ ಮತ್ತು ಇತರೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಇತ್ತೀಚಿನ ದಿನಗಳಲ್ಲಿ ಪದವೀಧರರಿಗೆ ಕಂಪ್ಯೂಟರ್ ಸೈನ್ಸ್ ಜ್ಞಾನ ಇಲ್ಲದಿದ್ದರೆ ಅಂತಹವರು ಉದ್ಯೋಗಕ್ಕೆ  ಅರ್ಹತೆಯನ್ನೇ ಪಡೆಯುವುದಿಲ್ಲ. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಲಿದೆ. ಆದ್ದರಿಂದ ಕಂಪ್ಯೂಟರ್‌ ಸೈನ್ಸ್‌ ವಿಷಯ ಸೇರಿಸಲು ಮನವಿ ಮಾಡಿದಾಗ ಅಧಿಕಾರಿಗಳು ಮನವಿಗೆ ಸ್ಪಂದಿಸಿದ್ದಾರೆ.

ಬಿ.ಕಾಂ ವಿದ್ಯಾರ್ಥಿಗಳಿಗೆ ಪ್ರಥಮ ಸೆಮಿಸ್ಟರ್‍ನಿಂದ ಅಂತಿಮ ಸೆಮಿಸ್ಟರ್‌ ವರೆಗೆ ಕಡ್ಡಾಯವಾಗಿ ಅರ್ಥಶಾಸ್ತ್ರ ವಿಷಯ  ಬೋಧನೆ ಮಾಡಲೇಬೇಕು ಎಂದು ಚರ್ಚಿಸಿದಾಗ ತಕ್ಷಣಕ್ಕೆ ಸ್ಪಂದಿಸಿದ ಅಧಿಕಾರಿಗಳು ಅರ್ಥಶಾಸ್ತ್ರ ವಿಷಯವನ್ನು ಕಡ್ಡಾಯ ಪತ್ರಿಕೆ ಮಾಡಿ ಪಠ್ಯಕ್ರಮದಲ್ಲಿ ಸೇರಿಸಲಾಗಿದೆ ಎಂದು ವಿ.ವಿ. ಅಧಿಕಾರಿಗಳು ತಿಳಿಸಿದ್ದಾರೆ.

ಪದವಿ ತರಗತಿಗಳಲ್ಲಿ ಎಲ್ಲಾ ವಿಷಯಗಳ ಬೋಧನಾ ಅವಧಿಯನ್ನು ವಾರಕ್ಕೆ ಆರು ಅವಧಿ ಮಾಡಿ ಕಾರ್ಯಭಾರ  ಹೆಚ್ಚಿಸಲು ತಾವು ಒತ್ತಾಯಿಸಿದಾಗ ಮುಂಬರುವ ಬಿಒಎಸ್ ಸಭೆಯಲ್ಲಿ ಕಾರ್ಯಭಾರ ಹೆಚ್ಚಿಸುವುದಾಗಿ ವಿವಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

error: Content is protected !!