ದಾವಣಗೆರೆ, ಜು. 3- ಮಹಾನಗರ ಪಾಲಿಕೆಯಲ್ಲಿ ನೌಕರರಾಗಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿ ಮೊನ್ನೆ ನಿವೃತ್ತರಾಗಿರುವ ಹುಲುಗಮ್ಮ ಸೋಮಲಾಪುರ, ಸರೋಜಮ್ಮ ರಂಗಪ್ಪ, ಬಸವರಾಜ ಅವರನ್ನು ಪಾಲಿಕೆ ಸಭಾಂಗಣದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಸನ್ಮಾನಿಸಲಾಯಿತು.
ನಿವೃತ್ತರನ್ನು ಸನ್ಮಾನಿಸಿ, ಗೌರವಿಸಿದ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕ ಅವರು, ಜನರ ಆರೋಗ್ಯ ಕಾಪಾಡುವಲ್ಲಿ ಮತ್ತು ಕೊರೊನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಜನರ ಪ್ರಾಣ ರಕ್ಷಣೆ
ಮಾಡಿರುವ ಹುಲುಗಮ್ಮ, ಸರೋಜಮ್ಮ, ಬಸವರಾಜ ಅವರುಗಳ ಸೇವೆ ಶ್ಲ್ಯಾಘನೀಯ ಎಂದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್. ಗೋವಿಂದರಾಜ್, ಪೌರ ಕಾರ್ಮಿಕ ಸಂಘದ ಉಪಾಧ್ಯಕ್ಷ ಸಾಗರ್, ಮುಖಂಡ ಸೋಮಲಾಪುರದ ಹನುಮಂತಪ್ಪ, ಕಚೇರಿ ವ್ಯವಸ್ಥಾಪಕ ಬಸವರಾಜಯ್ಯ, ಕಚೇರಿ ಸಹಾಯಕ ಸುರೇಶ್ ಪಾಟೀಲ್, ಪ್ರಥಮ ದರ್ಜೆ ಸಹಾಯಕ ಹೆಚ್. ರಮೇಶ್, ಪಿ. ಪ್ರೀತಿ ಮತ್ತಿತರರು ಉಪಸ್ಥಿತರಿದ್ದರು.