ಎಚ್‌. ದಾಸಪ್ಪ ಸೇವಾ ನಿವೃತ್ತಿ : ಸನ್ಮಾನ

ಎಚ್‌. ದಾಸಪ್ಪ ಸೇವಾ ನಿವೃತ್ತಿ  : ಸನ್ಮಾನ

ದಾವಣಗೆರೆ, ಜು.2- ಜಿಲ್ಲಾ ಸತ್ರ ನ್ಯಾಯಾಲಯ ಹಾಗೂ ಹರಿಹರದ ನ್ಯಾಯಾಲಯದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ 23 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎಚ್. ದಾಸಪ್ಪ ಅವರನ್ನು ಅವರ ನಿವಾಸದಲ್ಲಿ  ಜಿಲ್ಲಾ ಸರ್ಕಾರಿ ನೌಕರರ ಕಬಡ್ಡಿ ತಂಡದ ವತಿಯಿಂದ ಸನ್ಮಾನಿಸಲಾಯಿತು.

ದಾಸಪ್ಪನವರು ಸರ್ಕಾರಿ ನೌಕರರ ಜಿಲ್ಲಾ ಕಬಡ್ಡಿ ತಂಡದಲ್ಲಿ 20 ವರ್ಷಗಳಿಂದ ಕಬಡ್ಡಿ ಕ್ರೀಡಾ ಪಟುವಾಗಿ ಗುರುತಿಸಿಕೊಂಡಿದ್ದಾರೆ. ಈ ವೇಳೆ ಶಿಕ್ಷಕ ಸಿ. ಲೋಕೇಶ್, ವಾರ್ತಾ ಇಲಾಖೆಯ ಬಿ.ಎಸ್.ಬಸವರಾಜ್, ದಾದಾಪೀರ್, ಕರಿ ಬಸವರಾಜ್, ನಾಗರಾಜ್ ಇದ್ದರು.

error: Content is protected !!