ಪರಿಸರ ಸಂರಕ್ಷಣೆ ಎಲ್ಲರ ಹೊಣೆ : ನ್ಯಾ.ಮಹಾವೀರ ಕರೆಣ್ಣವರ್

ಪರಿಸರ ಸಂರಕ್ಷಣೆ ಎಲ್ಲರ ಹೊಣೆ : ನ್ಯಾ.ಮಹಾವೀರ ಕರೆಣ್ಣವರ್

ದಾವಣಗೆರೆ, ಜು.2-  ಮಾನವರಾಗಿ ನಾವು ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ್ ತಿಳಿಸಿದರು.

ಕುಂದುವಾಡ ಹತ್ತಿರದ ಕೆ.ಎಚ್.ಬಿ.ಕಾಲೋನಿಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಾನಗರಪಾಲಿಕೆ ಮತ್ತು ಅರಣ್ಯ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಒಬ್ಬ ಮನುಷ್ಯ ಗಿಡ, ಮರ ನೆಟ್ಟು, ಪೋಷಿಸುವುದರಿಂದ ಈ ಜಗತ್ತಿನ ಮತ್ತೊಬ್ಬ ಮನುಷ್ಯನಿಗೆ ಸಹಾಯ ಮಾಡಿದಂತಾಗುವುದು. ಆ ಮೂಲಕ ನಾವು ಜಗತ್ತಿಗೆ ಋಣ ಸಂದಾಯ ಮಾಡಿದಂತಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮಾಡಬೇಕು ಎಂದು ಕರೆ ನೀಡಿದರು.

ಒಂದು ಗಿಡ ನೆಟ್ಟು ಪೋಷಿಸುವ ಪ್ರತಿಯೊಂದು ಮಹೊನ್ನತ ಕೆಲಸವೂ ಮನುಷ್ಯನ ಮುಖವನ್ನು ಹೆಚ್ಚು ಆಕರ್ಷಣೀಯ ಮತ್ತು ಶ್ರೀಮಂತಗೊಳಿಸುತ್ತದೆ. ಪರಿಸರದ ಸಂರಕ್ಷಣೆಯಂತಹ ಕಾರ್ಯಕ್ಕೆ ಸಮಾನವಾಗಿರುವುದು ಬೇರಾವುದೂ ಇಲ್ಲ ಎಂದರು.

ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತರಾದ ರೇಣುಕಾ, ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿಗಳಾದ ಬಿ.ಶ್ರೀನಿವಾಸ್, ಕೋರ್ಟ್ ಮ್ಯಾನೇಜರ್ ಅಶ್ವಿನಿ ಕುಮಾರ್, ಅರಣ್ಯ ಇಲಾಖೆಯ ಅಧಿಕಾರಿ ಜ್ಯೋತಿ
ಹಾಗೂ ನ್ಯಾಯಾಂಗ ,ಮಹಾ ನಗರಪಾಲಿಕೆ, ಅರಣ್ಯ ಇಲಾಖೆ ಸಿಬ್ಬಂದಿಗಳು
ಉಪಸ್ಥಿತರಿದ್ದರು.

error: Content is protected !!