ಜಗಳೂರು, ಜು.2- ಸುದೀರ್ಘ ಕಾಲ ಸೇವೆ ಸಲ್ಲಿಸಿ, ನಿವೃತ್ತಿಯಾಗುತ್ತಿರುವ ಎ.ಎಂ.ಜಯ್ಯಣ್ಣ ಅವರ ಮುಂದಿನ ಜೀವನ ಸುಖವಾಗಿರಲಿ ಎಂದು ಜ್ಞಾನ ವಿಕಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮನೋಹರ್ ರೆಡ್ಡಿ ಹೇಳಿದರು. ತಾಲ್ಲೂಕಿನ ಅಣಬೂರು ಗ್ರಾಮದ ಶ್ರೀ ಮಾರುತಿ ಗ್ರಾಮಾಂತರ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ್ದ ದ್ವಿತೀಯ ದರ್ಜೆ ಸಹಾಯಕ ಎ.ಎಂ.ಜಯ್ಯಣ್ಣ ಹಾಗೂ ಸೇವಕ ಶಿವಕುಮಾರ್ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಮಾಜಿ ಜಿಲ್ಲಾ ಉಪಾಧ್ಯಕ್ಷ ಅಣಬೂರು ಮಠದ ಕೊಟ್ರೇಶ್, ಮುಖ್ಯ ಶಿಕ್ಷಕ ಕುಮಾರನಾಯ್ಕ, ಶಿಕ್ಷಕರಾದ ಸುನೀಲ್, ಶಿವಕುಮಾರ್, ಮಂಜುನಾಥ್, ಲೋಕೇಶ್, ಮಾರುತೇಶ್, ಸೇರಿದಂತೆ ಹಂಪಕ್ಕ ಜಯ್ಯಣ್ಣ, ಗುರುಚೇತನ್, ಅನಿತಾ ಭಾಮನಿ, ಗುರುಪ್ರಕಾಶ್, ಪೂಜಾ ಇತರರಿದ್ದರು.