ದಾವಣಗೆರೆ, ಜು.2- ನಗರದ ಶಿವಕುಮಾರ ಸ್ವಾಮಿ ಬಡಾವಣೆಯ ನವಚೇತನ ಕಿಡ್ಸ್ ಪ್ಲೇ ಹೋಂನಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅಡುಗೆ ಮನೆಯ ಹಸಿ ತ್ಯಾಜ್ಯವನ್ನು ಕಾಂಪೋಸ್ಟ್ ಗೊಬ್ಬರವನ್ನಾಗಿ ಪರಿವರ್ತಿಸುವ ಕಾರ್ಯಾಗಾರವನ್ನು ನಡೆಸಲಾಯಿತು.
ಪರಿವರ್ತನಾ ವೇದಿಕೆಯ ಅಧ್ಯಕ್ಷರಾದ ಡಾ. ಶಾಂತಾ ಭಟ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಗಾರವನ್ನು ಜಯಂತಿ ಚೌಧರಿ ಅವರು ನಡೆಸಿಕೊಟ್ಟರು. ನವಚೇತನ ಶಾಲೆಯ ಅಧ್ಯಕ್ಷರಾದ ಅಂಬುಜಾಕ್ಷಿ, ನಯನ, ಶಾಂತಿಶ್ರೀ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.