ಸರ್ಕಾರಿ ಶಾಲೆಗಳಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಿದರೆ ಎರಡು ಇಲಾಖೆಗೂ ಅನುಕೂಲ: ಜಿಲ್ಲಾಧಿಕಾರಿ ವೆಂಕಟೇಶ್

ಸರ್ಕಾರಿ ಶಾಲೆಗಳಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಿದರೆ ಎರಡು ಇಲಾಖೆಗೂ ಅನುಕೂಲ: ಜಿಲ್ಲಾಧಿಕಾರಿ ವೆಂಕಟೇಶ್

ದಾವಣಗೆರೆ. ಜು.1-   ಸರ್ಕಾರಿ ಶಾಲಾ ಆವರಣದಲ್ಲಿ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸುವುದರಿಂದ ಎರಡೂ ಇಲಾಖೆಗೂ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳು, ಮಹಾನಗರ ಪಾಲಿಕೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ನಿವೇಶನ ಪಡೆಯುವ ಕುರಿತು ಜಿಲ್ಲಾ ಮಟ್ಟದ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಅಂಗನವಾಡಿಯಲ್ಲಿ  ದಾಖಲಾಗಿರುವ ಮಕ್ಕಳು 6 ವರ್ಷದ ನಂತರ ನೇರವಾಗಿ ಶಾಲೆಗೆ ಪ್ರವೇಶ ಪಡೆಯುವುದರಿಂದ, ಸ್ಥಳಾವಕಾಶವಿರು ವಂತಹ ಸರ್ಕಾರಿ ಶಾಲಾ ಆವರಣದಲ್ಲಿ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಿದರೆ, ಎರಡೂ ಇಲಾಖೆಗಳಿಗೂ ಅನುಕೂಲವಾಗುತ್ತದೆ. ಅಕ್ಕ ಪಕ್ಕದ  ಮನೆಯಿಂದ ಶಾಲೆಗೆ ಹೋಗುವ ಮಕ್ಕಳ ಜೊತೆ ಅಂಗನವಾಡಿಗೆ ಬರುವ ಮಕ್ಕಳಿಗೂ ಸಹಕಾರಿಯಾಗುತ್ತದೆ. ಇದರಿಂದ ಯಾವುದೇ ಮಗು ಶಾಲೆಗೆ ದಾಖಲಾಗದೇ ಹೊರಗುಳಿ ಯುವುದನ್ನು ತಪ್ಪಿಸಬಹುದಾಗಿದೆ. 

ಶಾಲೆಯ ಆವರಣದಲ್ಲಿಯೇ ಅಂಗನವಾಡಿ ಮಕ್ಕಳು 3 ವರ್ಷಗಳ ಕಾಲ ಇರುವುದರಿಂದ ಶಾಲೆಗೆ ಸೇರಿದಾಗ ಶಾಲೆಯ ಭಯವಿಲ್ಲದೆ ಮಕ್ಕಳು ಬರಲು ಅಭ್ಯಾಸವಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲಾ ಆವರಣದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ಸ್ಥಳಾವಕಾಶ ಇದ್ದಲ್ಲಿ ಕಟ್ಟಡ ಕಟ್ಟಲು ಸಂಪೂರ್ಣ ಸಹಕಾರ ನೀಡಲು ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ತಿಳಿಸಿದರು.

ಪ್ರಸ್ತುತ ನಗರ ಪ್ರದೇಶದಲ್ಲಿ 195 ಮತ್ತು ಗ್ರಾಮೀಣ ಪ್ರದೇಶದಲ್ಲಿ 224 ಕಟ್ಟಡಗಳ ಅವಶ್ಯಕತೆ ಇದೆ. ಹೊಸವಾಗಿ ರಿಮೋಟ್ ಸೆನ್ಸಿಂಗ್ ತಂತ್ರಾಂಶದ ಮೂಲಕ ನಗರ ಪ್ರದೇಶದಲ್ಲಿ 104, ಗ್ರಾಮೀಣ ಪ್ರದೇಶದಲ್ಲಿ 19  ಒಟ್ಟು 123 ನಿವೇಶನಗಳನ್ನು ಶಿಶು ಅಭಿವೃದ್ಧಿ ಯೋಜನಾ ಧಿಕಾರಿಗಳು ಗುರುತಿಸಿರುತ್ತಾರೆ. ಸದರಿ 123 ನಿವೇಶನಗಳನ್ನು ಒಂದು ವಾರದ ಒಳಗಾಗಿ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆ ಅಧಿಕಾರಿ ಗಳು, ತಹಶೀಲ್ದಾರರು ಹಾಗೂ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು, ಸದರಿ ನಿವೇಶನ ಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಹಸ್ತಾಂತರಿಸಲು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್ ಮಾತನಾಡಿ, ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕಾಗಿ ದಾವಣಗೆರೆ ಜಿಲ್ಲೆಯಲ್ಲಿ 1771 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವ ಹಿಸುತ್ತಿದ್ದು, 1160 ಸ್ವಂತ ಕಟ್ಟಡಗಳಲ್ಲಿ ನಡೆಯುತ್ತಿವೆ. 399 ಅಂಗನವಾಡಿಗಳು ಬಾಡಿಗೆ ಕಟ್ಟಡ ಮತ್ತು 109 ಶಾಲೆ, 103 ಸಮುದಾಯ ಹಾಗೂ ಇತರೆ ಕಟ್ಟಡಗಳಲ್ಲಿ ನಡೆಯುತ್ತಿವೆ ಎಂದು ತಿಳಿಸಿದರು.

ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ  ಕೊಟ್ರೇಶ್. ಜಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!