ಹರಪನಹಳ್ಳಿ, ಜು.1 – ತಾಲ್ಲೂಕಿನ ಎಸ್ಸಿ ಎಸ್ಟಿ ಹಾಗೂ ಬಿಸಿಎಂ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿ, ನೀಟ್ ಪರೀಕ್ಷಾ ಅಕ್ರಮ ಖಂಡಿಸಿ, ಎ.ಐ.ಎಸ್.ಎಫ್ ತಾಲ್ಲೂಕು ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಅಲ್ಲದೇ ನೀಟ್ ಪರೀಕ್ಷಾ ಅಕ್ರಮ ಪ್ರಕರಣವು ಕೇಂದ್ರ ಸರ್ಕಾರದ ಅತ್ಯಂತ ದೊಡ್ಡ ಅಕ್ರಮವಾಗಿದೆ. ಈ ಅಕ್ರಮದಲ್ಲಿ ದೊಡ್ಡ ಪ್ರಭಾವಿಗಳು ಭಾಗಿಯಾಗಿರುವ ಸಂಶಯ ವ್ಯಕ್ತವಾಗಿದೆ. ಹಾಗಾಗಿ ಕೇಂದ್ರ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಬಹಳ ಅನುಮಾನ ಹುಟ್ಟಿಸಿದೆ. ಅದು ಯಾರನ್ನು ರಕ್ಷಣೆ ಮಾಡಲು ನಿಂತಿದೆ ಎನ್ನುವುದು ತಿಳಿಯುತ್ತಿಲ್ಲ. ದೇಶದಲ್ಲಿ 24 ಲಕ್ಷ ಮಕ್ಕಳು ಪರೀಕ್ಷೆ ಬರೆದಿದ್ದು, ಅವರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಸಮಿತಿ ದೂರಿದೆ.
ಈ ಸಂದರ್ಭದಲ್ಲಿ ಎ.ಐ.ಎಸ್.ಎಫ್ ತಾಲ್ಲೂಕು ಕಾರ್ಯದರ್ಶಿ ಅರುಣ್ಕುಮಾರ್ ಡಿ.ಹೆಚ್, ಮಾಜಿ ರಾಜ್ಯ ಕಾರ್ಯದರ್ಶಿ ಬಳಿಗನೂರು ಕೊಟ್ರೇಶ್, ರಮೇಶನಾಯ್ಕ ಮುಖಂಡರಾದ ದೊಡ್ಡಬಸವರಾಜ, ಗುರು ಬಸವರಾಜ, ಸುದೀಪ್, ಪಿ.ಕೆ ವೀರೇಶ್, ಪಿ.ಎಸ್.ಪ್ರಸನ್ನಕುಮಾರ್, ಕೆ.ವಿಶ್ವನಾಥ, ಡಿ.ರೋಷನ್ ಜಮೀರ್, ದಾದಾಪೀರ್, ವಿ.ಬಿ.ಸಾಗರ್, ಬಿ.ಮಹೇಂದ್ರ, ಬಿ.ಆರ್.ಮಂಜುನಾಥ ಮತ್ತಿತರರು ಇದ್ದರು.