ಮಕ್ಕಳಿಗೆ ಉಚಿತ ಪಠ್ಯ ಸಾಮಗ್ರಿ ವಿತರಣೆ

ಮಕ್ಕಳಿಗೆ ಉಚಿತ ಪಠ್ಯ ಸಾಮಗ್ರಿ ವಿತರಣೆ

ದಾವಣಗೆರೆ, ಜು.1- ನಗರದ ಹಳೇಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮಕ್ಕಳಿಗೆ, ಮಹಾಂತೇಶ ಒಣರೊಟ್ಟಿ ಅವರು ನೋಟ್ ಬುಕ್ ಮತ್ತು ಜಾಮೀಟ್ರಿ ಬಾಕ್ಸ್‌ಗಳನ್ನು ದಾನವಾಗಿ ನೀಡಿದರು.

ನೋಟ್ ಬುಕ್ ಮತ್ತು ಜಾಮೀಟ್ರಿ ಬಾಕ್ಸ್ ವಿತರಿಸಿ ಮಾತನಾಡಿದ ಉತ್ತರ ವಲಯದ ಬಿಇಓ ಶೇರ್ ಅಲಿ ಅವರು, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ಮತ್ತು ಉನ್ನತ ಹುದ್ದೆ ಪಡೆದು ಆರ್ಥಿಕವಾಗಿ ಸದೃಢರಾಗುವ ಜತೆಗೆ  ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವಂತೆ ಬೆಳೆಯಬೇಕು ಎಂದು ಆಶಿಸಿದರು.

ದಾನಿಗಳಾದ ಮಹಾಂತೇಶ ಒಣರೊಟ್ಟಿ ಮಾತನಾಡಿ, ನಾನು ವಿದ್ಯಾರ್ಥಿಯಾಗಿದ್ದಾಗ ಕಡು ಬಡತನ, ಹಸಿವು ಮತ್ತು ಕಷ್ಟ ಎದುರಿಸಿ ವಿದ್ಯಾಭ್ಯಾಸ ಮಾಡಿದ್ದೇನೆ. ಇಂದು ಆರ್ಥಿಕವಾಗಿ ಸದೃಢನಾಗಿದ್ದರಿಂದ ಬಡ ವಿದ್ಯಾರ್ಥಿಗಳಿಗೆ  ನಿರಂತರವಾಗಿ  ಕೈಲಾದಷ್ಟು ಸಹಾಯ ಮಾಡುವ ಮೂಲಕ ಸಂತೃಪ್ತಿ ಕಾಣುತ್ತಿದ್ದೇನೆ ಎಂದು ಹೇಳಿದರು.

ಈ ವೇಳೆ ಉತ್ತರ ವಲಯದ ಸಿಇಒ ಶಿವಲೀಲಾ, ಎಸ್.ಡಿ.ಎಂ.ಸಿ ಒಕ್ಕೂಟದ ಜಿಲ್ಲಾ ಪತ್ರಿಕಾ ಕಾರ್ಯದರ್ಶಿ ರಮೇಶ್ ಸಿ. ದಾಸರ್, ಶಾಲೆಯ ಮುಖ್ಯಶಿಕ್ಷಕ ಲೋಕಣ್ಣ, ಶಿವಕುಮಾರ್ ತಣಿಗೇರಿ, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಕೋಡುಬಾಳ ಚನ್ನಬಸಪ್ಪ, ಶಿಕ್ಷಕಿಯರಾದ ಸುಜಾತ, ಆರ್‌.ಸಿ. ಅನಸೂಯಮ್ಮ, ಸಂಪತ್ತು ಕುಮಾರಿ, ಜಯಶ್ರೀ, ಶಿಲ್ಪಾ, ರೂಪಾ ಮತ್ತು ವಿದ್ಯಾರ್ಥಿಗಳಿದ್ದರು.

error: Content is protected !!