ಮೂವರು ಕಳ್ಳರ ಬಂಧನ : 29 ಬೈಕ್ ವಶ

ಮೂವರು ಕಳ್ಳರ ಬಂಧನ : 29 ಬೈಕ್ ವಶ

ರಾಣೇಬೆನ್ನೂರು, ಜು.1- ಹಿರೇಕೆರೂರಿನ ಮೆಹಮೂದ್ ಮುಗಳಗೇರಿ, ಖಲಂದರ ಪಠಾಣ, ಹುಬ್ಬಳ್ಳಿಯ ತನ್ವೀರ ಲಕ್ಷ್ಮೇಶ್ವರ ಎನ್ನುವ ಕಾರ್ಯನಿರತ ಬೈಕ್ ಕಳ್ಳರನ್ನು   ಇಲ್ಲಿನ ಪೊಲೀಸರು ಬಂಧಿಸಿ, ಅವರಿಂದ  23 ಲಕ್ಷ ಕಿಮ್ಮತ್ತಿನ 29 ವಿವಿಧ ಕಂಪನಿಯ ಮೋಟಾರ್ ಬೈಕ್‌ಗಳನ್ನು ವಶಪಡಿಸಿಕೊಂಡಿರುವುದಾಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಂಶುಕುಮಾರ ನಗರ ಠಾಣೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನಗರದ ಐದು ಕಡೆ ಸೇರಿದಂತೆ ಬೆಂಗಳೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ, ಬೆಳಗಾವಿ, ಹಾಸನ, ಗದಗ  ಮುಂತಾದ ನಗರಗಳಲ್ಲಿ  ಬೈಕ್ ಕಳ್ಳತನ ಮಾಡಿರುವುದಾಗಿ  ಒಪ್ಪಿಕೊಂಡಿರುವ ಈ ಆರೋಪಿಗಳಲ್ಲಿ, ಇನ್ನೋರ್ವ ಹಿರೇಕೆರೂರಿ ನವನಾದ   ಹಬೀಬುಲ್ಲಾ ಕಚವಿ ಎಂಬಾತ ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ನಡೆದಿದೆ ಎಂದು ಎಸ್ಪಿ ವಿವರಿಸಿದರು.

ನಗರದಲ್ಲಿ ಬೈಕ್ ಕಳ್ಳತನದ ದೂರುಗಳು ಹೆಚ್ಚುತ್ತಿದ್ದು ಎನ್.ವಿ.ಹೋಟೆಲ್ ಹತ್ತಿರ ವಾಹನಗಳ ತಪಾಸಣೆ ನಡೆಸುವ ಸಂದರ್ಭದಲ್ಲಿ  ಸಂಶಯಾಸ್ಪದವಾಗಿ ಸಿಕ್ಕ ನಂಬರ್ ಪ್ಲೇಟ್ ರಹಿತ ಎರಡು ಬೈಕ್‌ಗಳ ಬಗ್ಗೆ  ಹೆಚ್ಚಿನ ಪತ್ತೆ ಕಾರ್ಯ ನಡೆಸಿದಾಗ ಆರೋಪಿಗಳ ಬಗ್ಗೆ ಮಾಹಿತಿ ದೊರೆತಿದ್ದು,  ಹಿರಿಯ ಅಧಿಕಾರಿಗಳಾದ ಅಂಶುಕುಮಾರ, ಸಿ. ಗೋಪಾಲ, ಡಾ. ಗಿರೀಶ ಬೋಜಣ್ಣನವರ ಮಾರ್ಗದರ್ಶನದಂತೆ ಸಿಪಿಐ ಡಾ. ಶಂಕರ್, ಎಸ್‌ಐಗಳಾದ ಗಡ್ಡೆಪ್ಪ ಗುಂಜಟಗಿ, ಎಚ್.ಎನ್.ದೊಡ್ಡಮನಿ ಅವರ ಜೊತೆಗೆ ಸಿ.ಬಿ.ಕಡ್ಲೆಪ್ಪನವರ, ವೈ.ಬಿ. ಓಲೇಕಾರ, ಪಿ.ಕೆ. ಸನದಿ, ಎಚ್.ಎಲ್. ದನುವಿನಮನಿ, ವಿಠಲ್ ಡಿ.ಬಿ., ರಾಮರಡ್ಡಿ ಕುಸಗೂರ, ಶ್ರೀ ಕಾಂತ ಕೊರವರ, ಮಾರುತಿ ಹಾಲಬಾವಿ, ಸತೀಶ ಮಾರಕಟ್ಟಿ ಅವರುಗಳು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

error: Content is protected !!