ದಾವಣಗೆರೆ, ಜೂ.30- ಶಾಮನೂರಿನ ಶರಣಯ್ಯ ಸ್ವಾಮಿ ಮತ್ತು ಶರಣಮ್ಮ ದಂಪತಿ ಪುತ್ರಿ ಸೌಭಾಗ್ಯ ಬೀಳಗಿಮಠ್ ಯುಪಿಎಸ್ಸಿ ಪರೀಕ್ಷೆಯಲ್ಲಿ 101ನೇ ಸ್ಥಾನ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಬಾಲ್ಯದಿಂದಲೂ ಐಎಎಸ್ ಆಗಬೇಕೆಂಬ ಕನಸು ಕಂಡಿದ್ದ ಸಾಧಕಿ ಸೌಭಾಗ್ಯ ಅವರು, ದಾವಣಗೆರೆಯಲ್ಲಿ ಪಿಯುಸಿ ವರೆಗಿನ ಶಿಕ್ಷಣ ಮುಗಿಸಿ ನಂತರ ಧಾರವಾಡದಲ್ಲಿ ಬಿ.ಎಸ್ಸಿ ಅಗ್ರಿ ಪದವಿ ಪಡೆದು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೊಡಗಿ ಈ ಸಾಧನೆ ಮಾಡಿದ್ದಾರೆ.
ನಗರದ ವಿನ್ನರ್ಸ್ ಅಕಾಡೆಮಿಯ ಸಂಸ್ಥಾಪಕ ಡಾ. ಶಿವರಾಜ್ ಕಬ್ಬೂರ ಅವರು ಸೌಭಾಗ್ಯ ಬೀಳಗಿಮಠ ಅವರ ಸಾಧನೆ ಮೆಚ್ಚಿ ಕುಟುಂಬ ವರ್ಗ ಹಾಗೂ ಸ್ಪರ್ಧಾತ್ಮಕ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸಾಧಕರನ್ನು ಸನ್ಮಾನಿಸಿ, ಗೌರವಿಸಿದರು. ನಗರದ ಎಸ್ಎಸ್ಎಂಬಿ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಅನಿತಾ ಎಚ್. ದೊಡ್ಡಗೌಡರ್ ಸೌಭಾಗ್ಯ ಬೀಳಗಿಮಠ ಅವರಿಗೆ ಶುಭ ಹಾರೈಸಿದರು.