ಬೀದಿಬದಿ ವ್ಯಾಪಾರಸ್ಥರಿಗೆ ಛತ್ರಿ ವಿತರಣೆ

ಬೀದಿಬದಿ ವ್ಯಾಪಾರಸ್ಥರಿಗೆ ಛತ್ರಿ ವಿತರಣೆ

ದಾವಣಗೆರೆ, ಜೂ.28- ಮಾತೃದೇವೋ ಸಮಾಜ ಕಲ್ಯಾಣ ಮತ್ತು ಶೈಕ್ಷಣಿಕ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದ  ಬಾಪೂಜಿ ಆಸ್ಪತ್ರೆ ರಸ್ತೆಯಲ್ಲಿರುವ ಹಾಗೂ ಜಯದೇವ ಸರ್ಕಲ್ ಬಳಿಯ ಹೂವಿನ ಮಾರ್ಕೆಟ್‌ನಲ್ಲಿನ ಬೀದಿಬದಿ ವ್ಯಾಪಾರಸ್ಥರಿಗೆ ಸಿರಿಗನ್ನಡಂ ವಿಕಲಚೇತನ ಚಾರಿಟಬಲ್‌ ಟ್ರಸ್ಟಿನ ಅಧ್ಯಕ್ಷ ವೆಂಕಟೇಶ ಕಣ್ಣೋಳರ ಅಪೇಕ್ಷೆ ಮೇರೆಗೆ ಛತ್ರಿ ವಿತರಣೆ ಮಾಡಲಾಯಿತು.

ಛತ್ರಿ ಸ್ವೀಕರಿಸಿದ ಫಲಾನುಭವಿಗಳು, ಮಳೆಗಾಲದಲ್ಲಿ ಛತ್ರಿಯು ಬಹಳ ಉಪಯುಕ್ತವಾಗಿದೆ ನಿಮ್ಮ ಸೇವೆಗೆ ದೇವರ ಕೃಪೆ ಇರಲಿ ಎಂದು ಹರಸಿದರು.

ಎರಡೂ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷರಾದ ಪೋತುಲ ಶ್ರೀನಿವಾಸ್ ಮತ್ತು ವೆಂಕಟೇಶ್ ಕಣ್ಣೋಳರ, ಸದಸ್ಯರಾದ ಕೆ.ವಿ.ರಾಘವೇಂದ್ರ, ಡಿ.ಜೆ. ಕೊಟ್ರೇಶ್, ರವಿತೇಜ. ಪ್ರಜ್ವಲ್, ವಿನಾಯಕ, ಹಾಲೇಶ್‌, ಕುಮಾರ್, ಬಸವರಾಜ್, ಹುಲ್ಮನೆ ಠಾಕೂರ್ ಮತ್ತು ಮಂಜುನಾಥ ಇದ್ದರು.

error: Content is protected !!