ಶ್ರೀ ಗಂಗಾಪರಮೇಶ್ವರಿ ಜಯಂತ್ಯುತ್ಸವದಲ್ಲಿ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಕರೆ
ದಾವಣಗೆರೆ, ಜೂ. 28- ಗಂಗಾ ಮತಸ್ಥ ಸಮಾಜ ಮೊದಲು ಸಂಘಟಿತ ವಾಗುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ತನ್ಮೂಲಕ ತಾಯಂದಿರು ಸಮಾಜದ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸಲು ಕಾರ್ಯ ಪ್ರವೃತ್ತರಾಗಬೇಕೆಂದು ಅಂಬಿಗರ ಚೌಡಯ್ಯ ಗುರುಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಕರೆ ನೀಡಿದರು.
ನಗರ ದೇವತೆ ಶ್ರೀ ದುರ್ಗಾಂಬಿಕ ದೇವಸ್ಥಾನದ ಹತ್ತಿರವಿರುವ ಶ್ರೀ ನಿಮಿಷಾಂಬ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಗಂಗಾಮತಸ್ಥ ಸಂಘದ ವತಿಯಿಂದ ಇಂದು ಹಮ್ಮಿಕೊಂಡಿದ್ದ ಶ್ರೀ ಗಂಗಾಪರಮೇಶ್ವರಿ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಮಾಜದ ತಾಯಂದಿರು ಜಾಗೃತರಾಗಿ ಸಮಾಜದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವು ದಲ್ಲದೇ ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಅಗತ್ಯವಿದೆ ಎಂದರು.
ಜಿಲ್ಲಾ ಗಂಗಾಮತಸ್ಥ ಸಮಾಜದ ಅಧ್ಯಕ್ಷ ಬಿ.ಕೆ. ಮಂಜುನಾಥ್ ಮಾಗಾನಹಳ್ಳಿ ಮಾತನಾಡಿ, ಗಂಗಾಮತಸ್ಥ ಸಮಾಜ ಸಂಘದಿಂದ ಸಾಕಷ್ಟು ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಈಗಾಗಲೇ ಸಮಾಜದ ಸುಸಜ್ಜಿತ ಕಟ್ಟಡ
ಕೂಡ ನಿರ್ಮಾಣವಾಗಿದೆ.
ಸಮಾಜದ ಬಡ ಮಕ್ಕಳಿಗೆ ಸಹಾಯ ಕೂಡ ಮಾಡ ಲಾಗುತ್ತಿದೆ. ಎಲ್ಲಾ ಕಾರ್ಯಚಟುವಟಿಕೆಗಳಿಗೆ ಸಮಾಜದ ಸರ್ವರೂ ಪ್ರೋತ್ಸಾಹಿಸಿದಾಗ ಇನ್ನೂ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಮಾಡಲು ಉತ್ಸಾಹ ಬರುತ್ತದೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗಂಗಾಪರಮೇಶ್ವರಿ ಜಯಂತ್ಯುತ್ಸವದ ಅಂಗವಾಗಿ 108 ಮಹಿಳೆಯರ ಪೂರ್ಣಕುಂಭ ಮೇಳ ಕೂಡ ನಡೆಯಿತು.
ಕಾರ್ಯಕ್ರಮದಲ್ಲಿ ಸಮಾಜದ ಮುಖಂಡ
ರಾದ ಪುಟಗನಾಳ್ ಮಂಜುನಾಥ್, ಕೆಂಚನಹಳ್ಳಿ ಮಹಾಂತಪ್ಪ, ಯೋಗರಾಜ್, ವಕೀಲರಾದ ಉಮೇಶ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯ ಅಜಯ್ ಕುಮಾರ್, ಲಿಂಗರಾಜ್, ರವಿಕುಮಾರ್, ಚಂದ್ರಪ್ಪ, ಬಾತಿ ಕೆಂಚಪ್ಪ, ಅಶೋಕ್ ಕೋಲ್ಕುಂಟೆ, ವಾಗೀಶ್, ಗಣೇಶ್, ಗಂಗಪ್ಪ ಸೇರಿದಂತೆ ಅನೇಕರಿದ್ದರು.