ಮಾದಕ ವ್ಯಸನ ಒಂದು ಸಂಕೀರ್ಣ ಸಮಸ್ಯೆ

ಮಾದಕ ವ್ಯಸನ ಒಂದು ಸಂಕೀರ್ಣ ಸಮಸ್ಯೆ

ಹರಪನಹಳ್ಳಿ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಡಾ.ವೆಂಕಟಪ್ಪ ನಾಯಕ

ಹರಪನಹಳ್ಳಿ, ಜೂ. 27- ಮಾದಕ ವಸ್ತುಗಳ ಬಳಕೆ ಮನುಷ್ಯನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಜೊತೆಗೆ ನೆರೆಹೊರೆಯ ವಾತಾವರಣ ವನ್ನು ಕಲುಷಿತ ಗೊಳಿಸುತ್ತದೆ ಎಂದು ಡಿವೈಎಸ್‌ಪಿ ಡಾ.ವೆಂಕಟಪ್ಪ ನಾಯಕ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಹರಪನಹಳ್ಳಿ ಪೊಲೀಸ್ ಠಾಣೆ ಹಾಗೂ  ಎಡಿಬಿ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ನಿನ್ನೆ ಹಮ್ಮಿಕೊಳ್ಳಲಾಗಿದ್ದ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವ್ಯಸನ ಎನ್ನುವುದು ಒಂದು ಸಂಕೀರ್ಣ ಸಮಸ್ಯೆಯಾಗಿದೆ. ತಾತ್ಕಾಲಿಕವಾಗಿ ಆನಂದ ನೀಡುವ ಮಾದಕ ದ್ರವ್ಯ ವಸ್ತುಗಳ ಅವಲಂ ಬನೆಗೆ ಒಳಗಾಗುವುದನ್ನು ಹೆಚ್ಚಾಗಿ ಸಮಾ ಜದಲ್ಲಿ ಕಾಣುತ್ತಿದ್ದೇವೆ. ಸ್ನೇಹಿತರ ಒತ್ತಾಯ, ದೈಹಿಕ, ಮಾನಸಿಕ ಒತ್ತಡ ಕಡಿಮೆ ಮಾಡಿ ಕೊಳ್ಳಲು ಹೀಗೆ ಅನೇಕ ಕಾರಣಗಳಿಗಾಗಿ ಜನರು ಮಾದಕ ವ್ಯಸನಗಳಿಗೆ ದಾಸರಾಗಿ ದ್ದಾರೆ. ಇಂತಹ ಹವ್ಯಾಸ ಬಿಟ್ಟು ಹೊರಬರ ಲಾರದ ಸ್ಥಿತಿಯಲ್ಲಿ ಬಳಲುತ್ತಿದ್ದಾರೆ ಎಂದರು.

ಸರ್ವೇ ಪ್ರಕಾರ ಮದ್ಯ ವ್ಯಸನಕ್ಕೆ ಒಳಗಾಗಿ ವಾಹನ ಚಲಾಯಿಸಿದವರಲ್ಲಿ ಶೇ. 30ರಷ್ಟು ಅಪಘಾತಗಳು ನಡೆದಿದ್ದರೆ, ಶೇ. 40ರಷ್ಟು ಮಂದಿ ಸಾವನ್ನಪ್ಪಿದ್ದಾರೆ. ಹಾಗಾಗಿ ಮಾದಕ ವಸ್ತಗಳನ್ನು ದೂರ ವಿಟ್ಟು, ಚಟಕ್ಕೆ ಒಳಗಾಗಿರುವ ಜನರನ್ನು ಹೊರತರಲು ಸರ್ಕಾರ ರೂಪಿಸಿರುವ ಇಂತಹ ಕಾರ್ಯಕ್ರಮಗಳು ಸಹಕಾರಿಯಾ ಗಿದ್ದು, ಸಂಘ-ಸಂಸ್ಥೆಗಳು ಈ ಕಾರ್ಯಕ್ಕೆ ಕೈಜೋಡಿಬೇಕು ಎಂದರು.

ಎಸ್ ಎಚ್ ಜೈನ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಬಸವರಾಜಪ್ಪ ಮಾತನಾಡಿ, ಕಳೆದ ಶತಮಾನದಲ್ಲಿ ಯುದ್ಧ ಮತ್ತು ಸಾಂಕ್ರಾಮಿಕ ರೋಗಗಳ ವಿರುದ್ದ ಮಾನವ ಸಮಾಜದ ಹೋರಾಟ ನಡೆದಿತ್ತು. ಈ ಶತಮಾನದಲ್ಲಿ ಈ ಭಯಗಳು ಒಂದಿಷ್ಟು ಕಡಿಮೆಯಾದರೂ ಮಾದಕ ವ್ಯಸನ ಗಂಭೀರ ಸಮಸ್ಯೆಯಾಗಿ ಕಾಡುತ್ತಿದೆ. ಮಾದಕ ದ್ರವ್ಯ ಸೇವನೆಯ ವ್ಯಸನ ಈಗ ವಿಶ್ವವ್ಯಾಪಿಯಾಗಿದೆ ಎಂದರು.

ಸಿಪಿಐ ನಾಗರಾಜ ಕಮ್ಮಾರ ಮಾತನಾಡಿ,   ಯಾವುದೋ ಕಾರಣದಿಂದ ವ್ಯಸನಕ್ಕೆ ದಾಸರಾದವರನ್ನು ಅದರಿಂದ ಮುಕ್ತ ಗೊಳಿಸಲು ಪೂರಕ ಚಿಕಿತ್ಸೆ ಬೇಕು. ಭಾರತವೂ ಸಹಿತ ಸುಮಾರು 162 ದೇಶಗಳಲ್ಲಿ ಇಂಥ ಸುಧಾರಣಾ ವ್ಯವಸ್ಥೆಗಳಿಲ್ಲ. ಜಗತ್ತಿನ 6 ವ್ಯಸನಿಗಳಲ್ಲಿ ಕೇವಲ ಒಬ್ಬನಿಗೆ ಮಾತ್ರ ಸುಧಾರಣ ಕೇಂದ್ರಗಳ ನೆರವು ದೊರೆಯುತ್ತಿದೆ ಎಂಬುದು ಕಳವಳಕಾರಿ ಸಂಗತಿ ಎಂದರು.

ಉಪನ್ಯಾಸಕ  ಸತೀಶ್‌ ಮಾತನಾಡಿ ದರು. ಪಿ.ಎಸ್.ಐ. ಶಂಭುಲಿಂಗಯ್ಯ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.

error: Content is protected !!