ಜಿಎಂಐಟಿ ಪಾಲಿಟೆಕ್ನಿಕ್ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇಂಡಕ್ಷನ್ ಪ್ರೋಗ್ರಾಮ್
ದಾವಣಗೆರೆ, ಜೂ. 24- ವಿದ್ಯಾರ್ಥಿಗಳು ತಮ್ಮ ಉತ್ತಮ ಶೈಕ್ಷಣಿಕ ಅಂಕಪಟ್ಟಿಯ ಜೊತೆಗೆ ಪಠ್ಯೇತರ ಚಟವಟಕೆಗಳಲ್ಲಿ ಭಾಗವಹಿಸಿದ್ದೇ ಆದರೆ ಅಂತಹ ವಿದ್ಯಾರ್ಥಿಗಳಿಗೆ ಕೈಗಾರಿಕಾ ವಲಯಗಳಲ್ಲಿ ಮೊದಲ ಆದ್ಯತೆಯನ್ನು ನೀಡಲಾಗುತ್ತಿದೆ ಎಂದು ಗ್ರಾಸಿಮ್ ಇಂಡಸ್ಟ್ರಿ ಲಿಮಿಟೆಡ್ ಕಂಪನಿಯ ಉತ್ಪಾದನಾ ವಲಯದ ಜನರಲ್ ಮ್ಯಾನೇಜರ್ ಡಿ.ಬದ್ರಿನಾಥ್ ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ಜಿಎಂಐಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸೋಮವಾರ ನಡೆದ ಡಿಪ್ಲೋಮೋ ಮೊದಲ ವರ್ಷ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಒಂದು ವಾರದ ಇಂಡಕ್ಷನ್ ಪ್ರೋಗ್ರಾಮ್ ಉದ್ಘಾಟಿಸಿ ಮಾತನಾಡಿದರು.
ಅನೇಕ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಓದಿ ಉನ್ನತ ಉದ್ಯೋಗಗಳನ್ನು ಅಲಂಕರಿಸಿದ್ದಾರೆ. ಯಾವುದಕ್ಕೂ ಹಿಂಜರಿಯದೆ ಸಾಧನೆಗೆ ವಿದ್ಯಾರ್ಥಿಗಳು ಹೆಚ್ಚು ಶ್ರಮವಹಿಸಬೇಕೆಂದು ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ಜಿಎಂಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ ಸಂಜಯ್ ಪಾಂಡೆ ಎಂ.ಬಿ, ಜಿಎಂಐಟಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಡಾ .ಬಿ. ಆರ್ ಶ್ರೀಧರ್ ಮಾತನಾಡಿದರು.
ಕು. ಅನುಶ್ರೀ ಎಸ್.ಜಿ. ಪ್ರಾರ್ಥಿಸಿದರು. ಪ್ರವೀಣ್ ಕುಮಾರ್ ಎಂ, ವಂದಿಸಿದರು. ಅಶೋಕ್ ಎಚ್.ಎಸ್ ಇಂಡಕ್ಷನ್ ಕಾರ್ಯಕ್ರಮದ ಮಾಹಿತಿ ನೀಡಿದರು. ನಿಂಗರಾಜು ಸಿ ಹಾಗೂ ಯಾಸ್ಮಿನ್ ಬೇಗಮ್ ನಿರೂಪಿಸಿದರು.