ಹೊನ್ನಾಳಿ : ಸರ್ಕಾರಿ ಶಾಲೆಗಳನ್ನು ಮುಚ್ಚದಿರುವಂತೆ ಶಾಸಕರಿಗೆ ಒತ್ತಾಯ

ಹೊನ್ನಾಳಿ : ಸರ್ಕಾರಿ ಶಾಲೆಗಳನ್ನು ಮುಚ್ಚದಿರುವಂತೆ ಶಾಸಕರಿಗೆ ಒತ್ತಾಯ

ಹೊನ್ನಾಳಿ, ಜೂ. 24 – ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನಲ್ಲಿ ಮೂರು ಸರ್ಕಾರಿ ಶಾಲೆಗಳನ್ನು ಮುಚ್ಚಿದ್ದು, ಈ ಶಾಲೆಗಳನ್ನು ಪುನಃ ಪ್ರಾರಂಭಿಸುವಂತೆ ಶಾಸಕ ಡಿ.ಜಿ. ಶಾಂತನಗೌಡರಿಗೆ  ಎಸ್ ಡಿಎಂಸಿ  ಸಮಿತಿಯ  ತಾಲ್ಲೂಕು ಅಧ್ಯಕ್ಷ ಶಿವಲಿಂಗಪ್ಪ ಹುಣಸಘಟ್ಟ  ಮನವಿ ಮಾಡಿದರು. 

ನಂತರ ಮಾತನಾಡಿದ ಶಿವಲಿಂಗಪ್ಪ, ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಶಿಕ್ಷಕರು ಮತ್ತು ಶಿಕ್ಷಣ ಇಲಾಖೆ ನಿರ್ಲಕ್ಷವೇ ಕಾರಣವಾಗಿವೆ. ಅವಳಿ ತಾಲ್ಲೂಕಿನ ಕಂಚಿನಾಳ, ಸಾಸಿವೆಹಳ್ಳಿ ಸ್ವಾಮಿ ವಿವೇಕಾನಂದ, ಮಾದಾಪುರ ತಾಂಡಾ ಸೇರಿದಂತೆ 3 ಶಾಲೆಗಳು ಮಕ್ಕಳಿಲ್ಲ ಎಂಬ ನೆಪದಲ್ಲಿ ಮುಚ್ಚಲು ಮುಂದಾಗುತ್ತಿದ್ದು ಶಾಸಕರು ಈ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಿದರು.  ಶಾಲೆಯ ಶಿಕ್ಷಕರು ಮನೆ ಮನೆಗೆ ಭೇಟಿ ನೀಡಿ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುವ ಕೆಲಸ ಮಾಡುವ ಅವಶ್ಯಕತೆ ಹೆಚ್ಚಿದೆ ಎಂದರು.  

ಶಾಸಕ ಶಾಂತನಗೌಡ ಮಾತನಾಡಿ, ಸಂಬಂಧಪಟ್ಟ ಇಲಾಖೆಯಲ್ಲಿ ಚರ್ಚಿಸಿ, ಕ್ರಮ ಕೈಗೊಳ್ಳುವ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿ ಜಿ.ಎಸ್. ಪಾರ್ವತಿ ನ್ಯಾಮತಿ ತಾಲ್ಲೂಕು ಅಧ್ಯಕ್ಷ ಬಿ.ವಿ. ರಾಜಶೇಖರ್, ತಾಲ್ಲೂಕು ಕಾರ್ಯದರ್ಶಿ ರಮೇಶ ಕೋಟೆ, ಮಲ್ಲೂರು ಪುಷ್ಪಲತಾ, ರುದ್ರ ನಾಯಕ್, ತಾಲ್ಲೂಕು ಕಾರ್ಯದರ್ಶಿ ಸತೀಶ್ ಬನ್ನಿಕೋಡು ಇದ್ದರು. 

error: Content is protected !!