ಶುಭಲಕ್ಷ್ಮಿ ಮಹಿಳಾ ಮಂಡಳಿಯಿಂದ ಪರಿಸರ ದಿನ

ಶುಭಲಕ್ಷ್ಮಿ ಮಹಿಳಾ ಮಂಡಳಿಯಿಂದ ಪರಿಸರ ದಿನ

ದಾವಣಗೆರೆ, ಜೂ. 24 – ಶ್ರೀ ಶುಭಲಕ್ಷ್ಮಿ ಮಹಿಳಾ ಮಂಡಳಿಯ ವತಿಯಿಂದ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಪ್ರೌಢಶಾಲೆಯಲ್ಲಿ ಗಿಡವನ್ನು ನೆಡುವುದರ ಮುಖಾಂತರ ಪರಿಸರ ದಿನಾಚರಣೆ ಆಚರಿಸಲಾಯಿತು. 

ಶುಭಲಕ್ಷ್ಮಿ ಮಹಿಳಾ ಮಂಡಳಿಯ ಅಧ್ಯಕ್ಷರಾದ ಪದ್ಮಜಾ ರಾವ್, ಗೌರವಾಧ್ಯಕ್ಷರರಾದ ವಸಂತ ಬಾಯಿ, ಕಾರ್ಯದರ್ಶಿ ದೀಪ, ಖಜಾಂಚಿ ಸರಳ, ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶೈಲಜಾ ಎಸ್.ಎಂ.,, ನಾಗರಾಜ್ ಎಸ್.ವಿ., ಸದಸ್ಯರುಗಳಾದ ಜ್ಯೋತಿ, ಅಕ್ಕಮಹಾದೇವಿ, ಶಿಲ್ಪ, ರೇಖಾ ಇದ್ದರು.

error: Content is protected !!