ಉತ್ತಮ ಆರೋಗ್ಯಕ್ಕೆ ರಕ್ತದಾನವೂ ಒಂದು ಮಾರ್ಗ

ಉತ್ತಮ ಆರೋಗ್ಯಕ್ಕೆ ರಕ್ತದಾನವೂ ಒಂದು ಮಾರ್ಗ

ಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ರಮೇಶ್  

 ಹರಿಹರ,ಜೂ.24-  ಉತ್ತಮ ಆರೋಗ್ಯ ಹೊಂದಲು ಹಲವಾರು ಮಾರ್ಗಗಳಿದ್ದು, ಅವುಗಳಲ್ಲಿ ರಕ್ತದಾನವೂ ಒಂದಾಗಿದೆ ಎಂದು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರಮೇಶ್ ಎಂ.ಎನ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್‍ಕ್ರಾಸ್ ಸಮಿತಿ ಮತ್ತು ಐಕ್ಯೂಎಸಿ   ವತಿಯಿಂದ ಆಯೋಜಿಸಲಾಗಿದ್ದ ರಕ್ತ ಪರೀಕ್ಷೆ ಮತ್ತು ರಕ್ತದಾನ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಸುಸ್ಥಿರ ಆರೋಗ್ಯಕ್ಕೆ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು.   ರಕ್ತದಾನ ಮಹಾದಾನವಾಗಿದ್ದು, ಅವಶ್ಯಕತೆ ಇರುವವರಿಗೆ ರಕ್ತವನ್ನು ನೀಡುವ ಮೂಲಕ ಜೀವರಕ್ಷಕರು ಆಗಬೇಕು. ಅಪಘಾತ, ಶಸ್ತ್ರಚಿಕಿತ್ಸೆ, ರಕ್ತಹೀನತೆ, ಕ್ಯಾನ್ಸರ್, ಹೆರಿಗೆ ಮತ್ತು ಇನ್ನಿತರ ಸಂದರ್ಭಗಳಲ್ಲಿ ರಕ್ತದ ಅಗತ್ಯವು ಸಾಕಷ್ಟು ಉದ್ಭವಿಸುತ್ತದೆ ಎಂದು ತಿಳಿಸಿದರು.

ಐಕ್ಯೂಎಸಿ ಸಂಯೋಜಕ  ಪ್ರೊ. ಜೆ.ಎಸ್.ಸುರೇಶ  ಹಾಗೂ ಪತ್ರಿಕೋದ್ಯಮ ವಿಭಾಗದ ಅಧ್ಯಾಪಕ  ಡಾ.ಯತೀಶ್ ಎಲ್.ಕೋಡಾವತ್ ಅವರು ರಕ್ತದಾನ ಮಾಡುವ ಮೂಲಕ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.  

ರೆಡ್‍ಕ್ರಾಸ್ ಸಂಸ್ಥೆಯ ಅಧಿಕಾರಿಗಳಾದ ಶಿವಕುಮಾರ್, ಚಿಗಟೇರಿ ಆಸ್ಪತ್ರೆಯ ಬ್ಲಡ್ ಬ್ಯಾಂಕ್‍ನ ಅಧಿಕಾರಿಗಳು, ದೈಹಿಕ ನಿರ್ದೇಶಕ  ಡಾ.ಚಂದ್ರಶೇಖರ್.ಎಸ್,  ಗ್ರಂಥಪಾಲಕ  ಚಿದಾನಂದ, ಸಹ ಪ್ರಾಧ್ಯಾಪಕರಾದ ಡಾ.ಮಂಜುನಾಥ.ಬಿ.ಕೆ., ಡಾ.ಹನುಮಂತಪ್ಪ ಕೆ.ಎಂ, ಡಾ.ಎಸ್.ತಿರುಮಲೇಶ್, ಮಂಜುನಾಥ ನರಸಗೊಂಡರ ಅವರುಗಳು  ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಪವಿತ್ರಾ ಪ್ರಾರ್ಥಿಸಿದರು, ರೆಡ್‍ಕ್ರಾಸ್ ಸಮಿತಿ ಸಂಯೋಜಕ ಡಾ.ಅನಂತನಾಗ್.ಹೆಚ್.ಪಿ,  ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ರೇಖಾ ಎನ್. ಕಾರ್ಯಕ್ರಮ ನಿರ್ವಹಿಸಿದರು.

error: Content is protected !!