ಯಲವಟ್ಟಿಯಲ್ಲಿ 29ಕ್ಕೆ ಜನಸ್ಪಂದನ ಸಭೆ

ಯಲವಟ್ಟಿಯಲ್ಲಿ 29ಕ್ಕೆ ಜನಸ್ಪಂದನ ಸಭೆ

ಮಲೇಬೆನ್ನೂರು, ಜೂ.24- ಯಲವಟ್ಟಿ ಗ್ರಾಮದಲ್ಲಿ ಇದೇ ದಿನಾಂಕ 29ರ ಶನಿವಾರದಂದು ತಾಲ್ಲೂಕು ಆಡಳಿತದಿಂದ ತಾಲ್ಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಗುರುಬಸವರಾಜ್ ತಿಳಿಸಿದರು.

ಅವರು, ಸೋಮವಾರ ಸಂಜೆ ಯಲವಟ್ಟಿ ಗ್ರಾಮಕ್ಕೆ ಭೇಟಿ ನೀಡಿ, ಜನಸ್ಪಂದನಾ ಕಾರ್ಯಕ್ರಮ ಜರುಗುವ ಶ್ರೀಗುರುಸಿದ್ಧಾಶ್ರಮದ ಆವರಣವನ್ನು ವಿಕ್ಷೀಸಿದ ನಂತರ ಗ್ರಾ.ಪಮ. ಕಚೇರಿಯಲ್ಲಿ ಗ್ರಾಮಸ್ಥರೊಂದಿಗೆ ಪೂರ್ವಭಾವಿ ಸಭೆ ನಡೆಸಿದರು.

ಜನಸ್ಪಂದನಾ ಕಾರ್ಯಕ್ರಮದಲ್ಲಿ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಲಾಗುವುದೆಂದು ತಹಶೀಲ್ದಾರ್ ಹೇಳಿದರು.

ಉಪತಹಶೀಲ್ದಾರ್ ಆರ್.ರವಿ, ಕಂದಾಯ ನಿರೀಕ್ಷಕ ಆನಂದ್, ಗ್ರಾಮಲೆಕ್ಕಾಧಿಕಾರಿ ಶರೀಫ, ಗ್ರಾಮದ ಮುಖಂಡರಾದ ಡಿ.ಯೋಮೇಶ್ವರಪ್ಪ, ಜಿ.ಆಂಜನೇಯ, ಡಿ.ಹೆಚ್.ಚನ್ನಬಸಪ್ಪ, ಹೊಸಮನಿ ಮಲ್ಲಪ್ಪ, ಚನ್ನಪ್ಪಗೌಡ, ಮಂಜಪ್ಪ, ಹೀರಾನಾಯ್ಕ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!