ಹೊನ್ನಾಳಿ ತುಂಗಭದ್ರಾ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಮುರುಗೇಶ್

ಹೊನ್ನಾಳಿ ತುಂಗಭದ್ರಾ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಮುರುಗೇಶ್

ಹೊನ್ನಾಳಿ, ಜೂ.24- ತುಂಗಭದ್ರಾ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ತರಗನಹಳ್ಳಿ ಮುರುಗೇಶ್ ಅವರು ತಮ್ಮ ಅವಧಿಯಲ್ಲಿ ಸಾಮಾಜಿಕ ಸುಧಾರಣೆಯ ಹಾಗೂ ಜನಪರ ಕೆಲಸಗಳನ್ನು ಮಾಡುವ ಮೂಲಕ ಲಯನ್ಸ್ ಕ್ಲಬ್‌ನ ಧ್ಯೇಯ – ಉದ್ದೇಶಗಳ ಈಡೇರಿಸುವಂತೆ ಆಗಲಿ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು. 

ಅವರು ನೂತನ ಲಯನ್ಸ್ ಕ್ಲಬ್ ಅಧ್ಯಕ್ಷ ತರಗನಹಳ್ಳಿ ಮುರುಗೇಶ್ ಅವರನ್ನು ಸನ್ಮಾನಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ಕಾಂಗ್ರೆಸ್ ಮುಖಂಡರಾದ ಹನುಮನಹಳ್ಳಿ ಬಸವರಾಜಪ್ಪ,  ಲಯನ್ಸ್ ಕ್ಲಬ್ ಸದಸ್ಯ ತರಗನಹಳ್ಳಿ ಎಸ್.ಬಿ.ಅಶೋಕ್ ಕುಮಾರ್ ಉಪಸ್ಥಿತರಿದ್ದರು.

error: Content is protected !!