ಯೋಗದಿಂದ ಮಾನಸಿಕ ಸಮಸ್ಯೆಗೆ ಮದ್ದು

ಯೋಗದಿಂದ ಮಾನಸಿಕ ಸಮಸ್ಯೆಗೆ ಮದ್ದು

ಹರಪನಹಳ್ಳಿಯ ಯೋಗ ದಿನಾಚರಣೆಯಲ್ಲಿ ಜಿಲ್ಲಾ ಯೋಗ ಶಿಬಿರದ ಸಂಚಾಲಕರಾದ ಕುಸುಮಾ

ಹರಪನಹಳ್ಳಿ, ಜೂ.22- ಯೋಗವು ಮಾನಸಿಕ ಸಮಸ್ಯೆಗಳ ನಿವಾರಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂಬುದು  ಇತ್ತೀಚಿನ ಪರಿಕಲ್ಪನೆಯೇನಲ್ಲ. ಹಿಂದಿನಿಂದಲೂ ವೈದ್ಯರು ಒತ್ತಡ ಸಂಬಂಧಿ ಖಾಯಿಲೆಗೆ ಯೋಗಾಭ್ಯಾಸದ ಸಲಹೆ ನೀಡುತ್ತಿದ್ದರು ಎಂದು ಜಿಲ್ಲಾ ಯೋಗ ಶಿಬಿರದ ಸಂಚಾಲ ಕರಾದ ಕುಸುಮಾ ಜಗದೀಶ್ ಹೇಳಿದರು.

ಪಟ್ಟಣದ ಜನನಿ ಯೋಗ ಮತ್ತು ನ್ಯಾಚರೋಪತಿ ಮೆಡಿಕಲ್ ಕಾಲೇಜ್ ಆವರಣದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ನಿನ್ನೆ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಳೆದ ಎರಡು ದಶಕದಿಂದ ಮತ್ತೆ ಈ ಬಗ್ಗೆ ಹೆಚ್ಚಿನ ಒಲವು ಮೂಡಿದ್ದು, ವೈಜ್ಞಾನಿಕ ಹಾಗೂ ಆಧುನಿಕ ಸಂಶೋಧನೆಗಳು ಕೂಡ ಯೋಗದ ಆಧಾರದಲ್ಲೇ ನಡೆಯುತ್ತಿದ್ದು, ಚಿಕಿತ್ಸೆಗೆ ಯೋಗದ ಮಧ್ಯಸ್ಥಿಕೆಯೆ ಅನಿವಾರ್ಯ ಎಂದೇ ಬಣ್ಣಿಸಲಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ.ಎಸ್.ಎನ್. ಮಹೇಶ್ ಅವರು, ಯೋಗದ ಹವ್ಯಾಸದಿಂದ ವ್ಯಕ್ತಿಯ ದೈಹಿಕ, ಮಾನಸಿಕ ಕಾರ್ಯ ನಿರ್ವಹಣೆ ಉತ್ತಮಗೊಳ್ಳಲಿದ್ದು, ವ್ಯಕ್ತಿಯ ಮಾನಸಿಕ ಖಿನ್ನತೆ ಮತ್ತು ನಿದ್ರಾಹೀನತೆ ಸಮಸ್ಯೆಗೆ ಸಹಾಯಕ ಚಿಕಿತ್ಸೆಯಾಗಿ ಯೋಗವನ್ನು ಬಳಸಲಾಗುತ್ತಿದೆ ಎಂದು ಹೇಳಿದರು.

ಮಾನಸಿಕ ಅಸ್ವಸ್ಥತೆಯ ವಿಧಗಳಾದ ಸ್ಕಿಜೋಪ್ರೇನಿಯಾ, ಮಕ್ಕಳಲ್ಲಿ ಅಟೆನ್ಶನ್ ಡಿಫಿಸಿಟ್ ಹೈಪರ್ ಆಕ್ಟಿವಿಟಿ ಡಿಸಾರ್ಡರ್ ಹಾಗೂ ವಯಸ್ಕರಲ್ಲಿ ಮರೆವಿನ ಕೊರತೆ ನಿವಾರಿಸುವ ಕಾರ್ಯದಲ್ಲೂ ಇದನ್ನು ಪೂರಕವಾಗಿ ಬಳಸಲಾಗುತ್ತದೆ ಎಂದು ವಿಶ್ಲೇಷಿಸಿದರು.

ಈ ವೇಳೆ ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷ ಕೆ. ಲಕ್ಷ್ಮಣ್‌, ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಎಸ್.ಪಿ. ಲಿಂಬ್ಯಾ ನಾಯ್ಕ, ಜೆ. ಓಂಕಾರಗೌಡ, ಬಿ.ವೈ. ವೆಂಕಟೇಶ ನಾಯ್ಕ್, ಮಾಜಿ ಪುರಸಭಾ ಅಧ್ಯಕ್ಷ ಮಂಜುನಾಥ್ ಇಜಂತಕರ್, ಉಪಾಧ್ಯಕ್ಷ ಎಂ. ಶಂಕರ್, ರೇಖಾ, ಪ್ರಧಾನ ಕಾರ್ಯದರ್ಶಿ ಉದಯಕುಮಾರ್, ಮುಖಂಡರಾದ ಪಿ.ವಿ. ಗುರುಬಸವರಾಜ್, ಬಾಗಳಿ ಕೊಟ್ರೇಶಪ್ಪ, ಮುನೇಗೌಡ, ಜಯಲಕ್ಷ್ಮಿ, ಮಮತಾ ಶೆಟ್ರು, ಕೊಟ್ರಮ್ಮಾ, ಕವಿತಾ, ವೈದ್ಯ ಡಾ, ಶ್ರೀಹರ್ಷ, ಯೋಗ ಕಾಲೇಜ್ ಪ್ರಾಚಾರ್ಯ ಡಾ. ರಾಜೇಶ್ ಪಡೆಕಲ್ ಮತ್ತು ಯೋಗ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿದ್ದರು.

error: Content is protected !!