ಮಹಿಳಾ ಸಮಾಜದ ಶಾಲೆಯಲ್ಲಿ ಯೋಗ ದಿನ

ಮಹಿಳಾ ಸಮಾಜದ ಶಾಲೆಯಲ್ಲಿ ಯೋಗ ದಿನ

ದಾವಣಗೆರೆ, ಜೂ. 22 – ಮಹಿಳಾ ಸೇವಾ ಸಮಾಜದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಟಿ.ಎಂ. ಚಿನ್ನಮ್ಮ ಮಹೇಶ್ವರಯ್ಯ ಮೆಮೋರಿಯಲ್ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ನಿನ್ನೆ ನಡೆದ ವಿಶ್ವ ಯೋಗ ದಿನ ಅಂಗವಾಗಿ ಮಹಿಳಾ ಸೇವಾ ಸಮಾಜದ ಕಾರ್ಯದರ್ಶಿ ಶ್ರೀಮತಿ ನೀಲಗುಂದ ಜಯಮ್ಮ ಗಿಡಕ್ಕೆ ನೀರೆರೆಯುವ ಮೂಲಕ ಯೋಗ ಕಾರ್ಯಕ್ರಮಕ್ಕೆ  ಚಾಲನೆ ನೀಡಿದರು.

ಪತಂಜಲಿ ಮುನಿಗಳನ್ನು ನೆನೆದು, ಯೋಗ ದಿನಾಚರಣೆಯ ಹಿನ್ನೆಲೆ, ಮಹತ್ವವನ್ನು ತಿಳಿಸಿದರು. 

ಶಿಕ್ಷಣ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು,  ದೈಹಿಕ ಶಿಕ್ಷಕ ಮರುಳಸಿದ್ದಪ್ಪ ಎಂ.ಎನ್. ಎಂ.ಬಿ. ಜಗದೀಶ ಕುಮಾರ್ ಹಾಗೂ ರಾಜ್ಯಮಟ್ಟದ ಯೋಗ ಪಟು, ಪ್ರಥಮ ಪಿಯುಸಿ ವಿದ್ಯಾರ್ಥಿನಿ ಕು. ಪಲ್ಲವಿ ಕೆ. ನೇತೃತ್ವದಲ್ಲಿ ಯೋಗಾಸನ ಮಾಡಿದರು. 

ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ದ್ರಾಕ್ಷಾಯಣಮ್ಮ ಆರ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರವಿಕುಮಾರ್ ಹೆಚ್ಎಸ್.  ಹಾಗೂ  ಇತರರು ಉಪಸ್ಥಿತರಿದ್ದರು.

error: Content is protected !!