ಯತ್ತಿನಹಳ್ಳಿ : ಎಸ್‍ಡಿಎಂಸಿ ಅಧ್ಯಕ್ಷರಾಗಿ ಮಹೇಶ್

ಯತ್ತಿನಹಳ್ಳಿ : ಎಸ್‍ಡಿಎಂಸಿ ಅಧ್ಯಕ್ಷರಾಗಿ ಮಹೇಶ್

ರಾಣೇಬೆನ್ನೂರು, ಜೂ.22 – ತಾಲ್ಲೂಕಿನ ಯತ್ತಿನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎಸ್‍ಡಿಎಂಸಿ ಅಧ್ಯಕ್ಷರಾಗಿ ಮಹೇಶ ಚ. ಹೊಳಲು ಹಾಗೂ ಉಪಾಧ್ಯಕ್ಷರಾಗಿ ರೂಪಾ ಗ. ಮಾಚೇನಹಳ್ಳಿ ಅವರು ಅವಿರೋಧವಾಗಿ ಆಯ್ಕೆಯಾದರು. 

ಸದಸ್ಯರುಗಳಾಗಿ ಶಂಭುಲಿಂಗಪ್ಪ ಕುರುವತ್ತಿ, ಮಾರುತಿ ಬಳ್ಳಾರಿ, ಅಶೋಕ ಸೊಲಬಕ್ಕನವರ, ಮುಕ್ತೇಶ ಹಿರೇಮಠ, ಫಕ್ಕಿರೇಶ ಗುಡೂರ, ಜಗದೀಶ ಬಳ್ಳಾರಿ, ಶಿವರಾಜ ಗಂಗಾಪುರ, ಗುಡ್ಡಪ್ಪ ಹರಿಜನ, ರೇಣುಕಾ ವಾಳದ, ಶಾರದಾ ಗಂಗಾಪುರ, ರೇಖಾ ಮಾದಾಪುರ, ಜ್ಯೋತಿ ಪೂಜಾರ, ಲಕ್ಷ್ಮೀ ಕಾಯಕದ, ಪ್ರಭಾವತಿ ಕುರುವತ್ತಿ, ವನಜಾಕ್ಷಿ ಕುರುವತ್ತಿ, ಪೂಜಾ ಹೀಲದಹಳ್ಳಿ ಆಯ್ಕೆಯಾದರು. 

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ ಮಾಚೇನಹಳ್ಳಿ, ಸದಸ್ಯ ರುದ್ರಪ್ಪ ಮೂಲಿಮನಿ, ಗ್ರಾಪಂ ಪಿಡಿಓ ಸಿದ್ದಮ್ಮ ಎ.ಡಿ, ಮತ್ತು ಇತರರು ಇದ್ದರು. 

error: Content is protected !!