ವಿದ್ಯಾರ್ಥಿ ಜೀವನ ಸದುಪಯೋಗ ಪಡಿಸಿಕೊಂಡಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ

ವಿದ್ಯಾರ್ಥಿ ಜೀವನ ಸದುಪಯೋಗ ಪಡಿಸಿಕೊಂಡಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ

ರಾಣೇಬೆನ್ನೂರು, ಜೂ.23- ವಿದ್ಯಾರ್ಥಿ ಜೀವನದಲ್ಲಿ ಸಿಗುವ     ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ಎತ್ತರಕ್ಕೆ ಬೆಳೆದು,   ನಿಮ್ಮ ಆತ್ಮಬಲ ಹೆಚ್ಚಿಸಿಕೊಳ್ಳಿ. ಆಗ ಯಶಸ್ಸು ಸಹ ನಿಮ್ಮೊಟ್ಟಿಗೆ ಬರುತ್ತದೆ ಎಂದು ಎಸ್‌ಟಿಜೆ  ಪ್ರಾಧ್ಯಾಪಕ ಡಾ. ಎಂ. ಈ. ಶಿವಕುಮಾರ ಹೊನ್ನಾಳಿ ಹೇಳಿದರು.

ಹಿರೇಕೆರೂರು ತಾಲ್ಲೂಕು ಹಂಸಬಾವಿಯ ರೂರಲ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ   ಪ್ರಥಮ ವರ್ಷದ  ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಅನಾವಶ್ಯಕವಾಗಿ ಸಮಯ ವ್ಯರ್ಥ ಮಾಡದೆ, ಸೃಜನಾತ್ಮಕ ಹಾಗೂ ಕ್ರಿಯಾತ್ಮಕ  ಕಾರ್ಯಗಳಲ್ಲಿ ತೊಡಗಿಸಿಕೊಂಡು ಹೆತ್ತವರಿಗೆ, ಕಲಿಸಿದವರಿಗೆ ಹಾಗೂ ಓದಿದ ಸಂಸ್ಥೆಗೆ ಕೀರ್ತಿ ತನ್ನಿ, ವಿದ್ಯಾರ್ಥಿ ಗಳ ಜೀವನದಲ್ಲಿ ಸಮಯ ಅಮೂಲ್ಯವಾದದ್ದು, ಕಲಿಕೆಯ ವೇಳೆ ಕಾಲ ಹರಣ ಮಾಡದೇ ಶ್ರದ್ಧೆಯಿಂದ ಅಧ್ಯಯನ ಮಾಡಿ  ಎಂದು ಅವರು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಕಾಲೇಜಿನ ಪ್ರಾಂಶಪಾಲ ಪ್ರೊ. ಶಿವಕುಮಾರ ಚನ್ನವೀರಗೌಡ ಅಧ್ಯಕ್ಷತೆ ವಹಿಸಿದ್ದರು.  ಮೃತ್ಯುಂಜಯ ವಿದ್ಯಾಪೀಠದ ಚೇರ್ಮನ್ ಪಿ. ವಿ. ಕೆರೂಡಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪ್ರೊ.ಜಿ.ಎ. ಗಾಣಿಗ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎ.ಎಸ್ ಶಿವರಾಜ್,  ವೀರೇಶ್ ಹಿರೇಮಠ್, ಭೀಮಸೇನ್ ಕೊರ್ಲಿಹಳ್ಳಿ, ಗೋಪಾಲ್ ಗಾಣಿಗ, ಮಲ್ಲಿಕಾರ್ಜುನ್ ಕೆರೂಡಿ ವೇದಿಕೆಯಲ್ಲಿದ್ದರು.  ರಾಜಶೇಖರ್ ಸ್ವಾಗತಿಸಿದರು.  ಎಸ್. ಎನ್  ಮೆಡ್ಲೇರಿ  ವಂದಿಸಿದರು. ಎಸ್. ವಿ  ಅರುಣ್ ಕುಮಾರ್  ಕಾರ್ಯಕ್ರಮ ನಿರೂಪಿಸಿದರು.

error: Content is protected !!