ಹರಪನಹಳ್ಳಿ ತಾ.ನ ತೌಡೂರಿನಲ್ಲಿ ಕಣ್ಣು ತಪಾಸಣೆ ಶಿಬಿರ

ಹರಪನಹಳ್ಳಿ ತಾ.ನ ತೌಡೂರಿನಲ್ಲಿ ಕಣ್ಣು ತಪಾಸಣೆ ಶಿಬಿರ

ಹರಪನಹಳ್ಳಿ, ಜೂ.20- ಮನುಷ್ಯನಿಗೆ ಎಲ್ಲಾ ಅಂಗಾಂಗ ಗಳಿಗಿಂತ ಕಣ್ಣೇ ಅತೀ ಅವಶ್ಯಕ, ಕಣ್ಣು ಇದ್ದರೆ ಇಡೀ ಪ್ರಪಂಚ ವನ್ನು ನೋಡಬಹುದು ಎಂದು  ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಯರಬಳ್ಳಿ ಉಮಾಪತಿ ಹೇಳಿದರು.

ತಾಲ್ಲೂಕಿನ ತೌಡೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ಮತ್ತು  `ವಾಸನ್ ಐ ಕೇರ್ ಕಣ್ಣಿನ ಆಸ್ಪತ್ರೆ’ ಇವರ  ಆಶ್ರಯದಲ್ಲಿ  ಹಮ್ಮಿಕೊಳ್ಳಲಾಗಿದ್ದ ಕಣ್ಣಿನ ತಪಾಸಣಾ ಶಿಬಿರವನ್ನು ಉದ್ಘಾಟಿಸಿ  ಅವರು ಮಾತನಾಡಿದರು.

ಕಣ್ಣು ಇಲ್ಲದಿದ್ದರೆ ನಮ್ಮ ಜೀವನವೇ ಬರಡಾಗಿ ಹೋಗುತ್ತದೆ, ಪ್ರತಿಯೊಬ್ಬರೂ ಕಣ್ಣನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಕ್ಯಾರಕಟ್ಟೆ ಕೊಟ್ರುಗೌಡ, ಆಸ್ಪತ್ರೆ ವೈದ್ಯಾಧಿ ಕಾರಿ  ಹೆಚ್.ಎಸ್.ನಾಗರಾಜ್  ಮತ್ತಿತರರು ಮಾತನಾಡಿದರು.

ಈ ಸಂದರ್ಭದಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ ಕೆ.ಎಂ. ಮಂಜುನಾಥಯ್ಯ, ತೌಡೂರು ಕೆಂಚಪ್ಪ, ಶೆಟ್ಟಿನಾಯ್ಕ್, ಕೊಟ್ರುಗೌಡ, ನಿರ್ದೇಶಕರಾದ ದೊಡ್ಡ ಸಿದ್ದಪ್ಪ, ಡಿ.ಕೆ.ಪರುಸಪ್ಪ, ಜಿಟ್ಟನಕಟ್ಟೆ ಹನುಮಂತಪ್ಪ, ಕಾರ್ಯದರ್ಶಿ ಬಸವರಾಜ್, ಮಲ್ಲೇಶ್,   ನೂರ್ ಅಹಮದ್, ಮನೋಜ್, ಕಾವ್ಯ ಸೇರಿದಂತೆ ಇತರರು ಇದ್ದರು.

error: Content is protected !!